×
Ad

ಮುಡಿಪು: ಮಜ್ಲಿಸುನ್ನೂರು ಸಂಗಮಕ್ಕೆ ಚಾಲನೆ

Update: 2017-08-04 22:35 IST

ಬಂಟ್ವಾಳ, ಆ. 4: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಮುಡಿಪು ಇದರ ಅಧೀನ ಸಂಸ್ಥೆಗಳಾದ ಎಮ್.ಐ.ಸಿ. ಕತ್ತಾರ್ ಸಮಿತಿ , ಎಮ್.ಐ.ಸಿ ಯೂತ್ ವಿಂಗ್ ,ಎಮ್.ಐ.ಸಿ ದಅವಾ ವಿಂಗ್ ಇದರ ಜಂಟಿ ಆಶ್ರಯದಲ್ಲಿ ಆಧ್ಯಾತ್ಮಿಕ ಮಜ್ಲಿಸ್ ಮಜ್ಲಿಸುನ್ನೂರಿಗೆ ಸೈಯದ್ ಕುಂಬೋಳ್ ಕೆ.ಎಸ್.ಅಲೀ ತಂಙಳ್  ಎಸ್.ಯು.ಐ.ಸಿ. ಕಚೇರಿ ಮುಡಿಪುವಿನಲ್ಲಿ ಚಾಲನೆಯನ್ನು ನೀಡಿದರು.

ಶೈಖುನಾ ಪಾತೂರು ಉಸ್ತಾದ್ ಪ್ರಾರ್ಥನೆ ನೆರವೇರಿಸಿದರು. ಸೈಯದ್ ಬಾತಿಷಾ ತಂಙಳ್ ಆನೆಕಲ್ಲು,  ಸೈಯದ್ ಬದ್ರುದ್ಧೀನ್ ತಂಙಳ್ ಮಂಜೇಶ್ವರ ಮಾತನಾಡಿದರು.

ಯಾಸೀರ್ ಅರಾಫತ್ ಕೌಸರಿ ಪನೀರು ಮುಖ್ಯ ಪ್ರಭಾಷಣಗೈದರು. ಎಮ್.ಐ.ಸಿ. ದಅವಾ ವಿಂಗ್ ಅಧ್ಯಕ್ಷ ಸೈಯದ್ ಉಮರುಲ್ ಫಾರೂಖ್ ತಂಙಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಎಸ್.ಯು.ಐ.ಸಿ. ಮುಡಿಪು ಸಮಿತಿ ವತಿಯಿಂದ ಹಾಜಿ ಇಬ್ರಾಹಿಂ ಪನೀರು(ಉದ್ಯಮಿ, ಕತ್ತಾರ್) ಇವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಹೈದರ್ ಕಲ್ಲಡ್ಕ, ಹನೀಫ್ ಸಜಿಪ, ಅಬೂಸ್ವಾಲಿ ಪನೀರು, ಜಾಫರ್ ಮುಸ್ಲಿಯಾರ್ ಸಾಂಬಾರುತೋಟ ಮತ್ತಿತ್ತರರು ಉಪಸ್ಥಿತರಿದ್ದರು.  

ಎಸ್.ಯು.ಐ.ಸಿ ಮುಡಿಪು ಕಾರ್ಯ ಸಂಯೋಜಕರಾದ ಅಬ್ದುಲ್ ಖಾದರ್ ಯಮಾನಿ ಪೊಯ್ಯತ್ತಬೈಲು ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News