×
Ad

ಉದ್ಯೋಗ ನೇಮಕಾತಿ ಪತ್ರ ಹಸ್ತಾಂತರ ಕಾರ್ಯಕ್ರಮ

Update: 2017-08-04 23:29 IST

ಮಂಗಳೂರು, ಆ. 4: ಎಂಆರ್‌ಪಿಎಲ್‌ನ ಕೌಶಲ್ ವಿಕಾಸ್ ಕೇಂದ್ರದಲ್ಲಿ ‘ಇಂಡಸ್ಟ್ರಿಯಲ್ ಇಲೆಕ್ಟ್ರೀಷಿಯನ್’ ಮತ್ತು ‘ಸಿಎನ್‌ಸಿ ಆಪರೇಟರ್’ - ಈ ಎರಡು ವಿಭಾಗಗಳಲ್ಲಿ ತರಬೇತಿ ಪಡೆದಿದ್ದ ಅಭ್ಯರ್ಥಿಗಳಿಗೆ ಉದ್ಯೋಗ ನೇಮಕಾತಿ ಪತ್ರ ಹಸ್ತಾಂತರ ಕಾರ್ಯಕ್ರಮ ಎನ್‌ಟಿಟಿಎಫ್ ಬೆಂಗಳೂರು ಕೇಂದ್ರದಲ್ಲಿ ಜರಗಿತು.

ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದ 57 ಅಭ್ಯರ್ಥಿಗಳಿಗೆ ಎಂಆರ್‌ಪಿಎಲ್ ನಿರ್ದೇಶಕ ಎಂ.ವೆಂಕಟೇಶ್ ಮತ್ತು ಎನ್‌ಟಿಟಿಎಫ್ ಆಡಳಿತ ನಿರ್ದೇಶಕ ಎನ್.ರೇಗುರಾಜ್ ನೇಮಕಾತಿ ಪತ್ರ ಹಸ್ತಾಂತರಿಸಿದರು.

ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳು ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಜೀವನದ ಸವಾಲುಗಳನ್ನು ಎದುರಿಸಬೇಕು ಎಂದು ಎಂಆರ್‌ಪಿಎಲ್ ನಿರ್ದೇಶಕ ಎಚ್.ಕುಮಾರ್ ಹೇಳಿ ಶುಭ ಹಾರೈಸಿದರು.

ಈ ಅಭ್ಯರ್ಥಿಗಳಿಗೆ ಬೆಂಗಳೂರು, ಮಂಗಳೂರು ಮತ್ತು ಉಡುಪಿಯ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ದೊರೆಕಿದ್ದು, ತರಬೇತಿ ವ್ಯವಸ್ಥೆಗೊಳಿಸಿ ಬಳಿಕ ಸೂಕ್ತ ಉದ್ಯೋಗ ಪಡೆಯುವಲ್ಲಿ ಮಾರ್ಗದರ್ಶನ ನೀಡಿದ ಎಂಆರ್‌ಪಿಎಲ್ ಸಂಸ್ಥೆಗೆ ಅಭ್ಯರ್ಥಿಗಳು ಕೃತಜ್ಞತೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News