×
Ad

ಬಾಲವೇದಿ ಎಸ್‌ಬಿವಿ ಪದಾಧಿಕಾರಿಗಳ ಆಯ್ಕೆ

Update: 2017-08-05 18:46 IST

ಮಂಗಳೂರು, ಆ. 5: ಅಡ್ಡೂರಿನ ಅಲ್ ಮದ್ರಸತುಲ್ ಬದ್ರಿಯ್ಯದ ವಿದ್ಯಾರ್ಥಿ ಸಂಘಟನೆಯಾದ ಸುನ್ನೀ ಬಾಲ ವೇದಿ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು.

ಸ್ಥಳೀಯ ಮುಅಲ್ಲಿಂ ಮುಸ್ತಫಾ ಹನೀಫಿ ದುವಾ ನೆರವೇರಿಸಿ, ಅಬೂಬಕರ್ ಮುಸ್ಲಿಯಾರ್ ಸಭೆಯನ್ನು ಉದ್ಘಾಟಿಸಿದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಹಾರಿಸ್, ಉಪಾಧ್ಯಕ್ಷರಾಗಿ ಇರ್ಷಾದ್, ಪ್ರಧಾನ ಕಾರ್ಯದರ್ಶಿಯಾಗಿ ನಿಹಾಲ್, ಜೊತೆ ಕಾರ್ಯದರ್ಶಿಯಾಗಿ ಮರ್‌ಝಾನ್ ಮತ್ತು ಸುಹೈಲ್, ಕೋಶಾಧಿಕಾರಿಯಾಗಿ ಸಅದ್ ಹಾಗೂ ರೇಂಜ್ ಕೌನ್ಸಿಲರ್‌ಗಳನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಶರೀಫ್ ದಾರಿಮಿ, ಹಮೀದ್ ಮುಸ್ಲಿಯಾರ್, ಉಸ್ಮಾನ್ ಮುಸ್ಲಿಯಾರ್, ಎಚ್.ಎಂ.ಹನೀಫ್ ಮುಸ್ಲಿಯಾರ್ ಉಪಸ್ಥಿತರಿದ್ದರು. ನಿಹಾಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News