×
Ad

ಸೈಕಲ್, ಸಮವಸ್ತ್ರ ಹಾಗೂ ಸ್ಯಾಂಡಲ್ ವಿತರಣಾ ಕಾರ್ಯಕ್ರಮ

Update: 2017-08-05 19:24 IST

ಉಳ್ಳಾಲ,ಆ.5: ಮಕ್ಕಳನ್ನು ಶಾಲೆಗೆ ಬರಲು ಪ್ರೇರೇಪಿಸುವ ಯೋಜನೆಗಳು ಸರಕಾರದಿಂದ ನಡೆಯುತ್ತಿರುವುದು ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ಅತ್ಯಂತ ಪರಿಣಾಮಕಾರಿಯಾಗಿದ್ದು,  ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸುವ ಮೂಲಕ ಉತ್ತಮ ಕಲಿಕೆಯನ್ನು ನಡೆಸಬೇಕಿದೆ ಎಂದು ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಖ್ ತಲಪಾಡಿ ಅಭಿಪ್ರಾಯಪಟ್ಟರು.

 ಅವರು ತಲಪಾಡಿ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 2017-18 ನೇ ಸಾಲಿನ ಸೈಕಲ್, ಸಮವಸ್ತ್ರ ಹಾಗೂ  ಸ್ಯಾಂಡಲ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

  ರಾಷ್ಟ್ರೀಯ ಹೆದ್ದಾರಿ ಮತ್ತು ಶಾಲೆ ಎತ್ತರದ ಪ್ರದೇಶದಲ್ಲಿ ಇರುವುದರಿಂದ  ಅವಶ್ಯಕತೆ ಬಿದ್ದಲ್ಲಿ ಸೈಕಲ್ ಅನ್ನು  ಜಾಗರೂಕರಾಗಿ ಉಪಯೋಗಿಸುವಂತೆ ಸಲಹೆ ನೀಡಿದ ಅವರು,  ಸರಕಾರಿ ಶಾಲೆ ವಿದ್ಯಾರ್ಥಿಗಳು  ಉತ್ತಮವಾಗಿ ಶಿಕ್ಷಣ ಪಡೆಯುವಂತೆ ಸರಕಾರ ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ. ಇದನ್ನು  ವಿದ್ಯಾರ್ಥಿಗಳಿಗೆ ಸಿಗುವಂತೆ ಶಿಕ್ಷಕರು ಹಾಗೂ ಹೆತ್ತವರು  ಶ್ರಮ ವಹಿಸಬೇಕಿದೆ ಎಂದರು. 

  ಈ ಸಂದರ್ಭ  ತಾಲೂಕು ಪಂಚಾಯತ್ ಸದಸ್ಯ ಸಿದ್ದೀಖ್ ಕೊಳಂಗೆರೆ, ತಲಪಾಡಿ ಗ್ರಾ.ಪಂ ಸದಸ್ಯ ಇಬ್ರಾಹಿಂ,   ಉದ್ಯಮಿಗಳಾದ  ಮೂಸ ತಲಪಾಡಿ,  ಸಂಶುದ್ದೀನ್,  ಅಬ್ದುಲ್ ಲತೀಫ್  ಮತ್ತು ಶಾಲಾ ಮುಖ್ಯಶಿಕ್ಷಕಿ  ಶರ್ಮಿಳಾ ಉಚ್ಚಿಲ್ ಮುಖ್ಯ ಅತಿಥಿಗಳಾಗಿದ್ದರು.

  ಶಿಕ್ಷಕಿ ಸುಜಯ ಸ್ವಾಗತಿಸಿದರು. ಶರ್ಮಿಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.  ಜ್ಯೋತಿ ಲೋಕೇಶ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News