×
Ad

ಜಿ.ಎಸ್.ಟಿ ಮತ್ತು ಆದಾಯ ತೆರಿಗೆಯ ಬಗ್ಗೆ ಮಾಹಿತಿ ಕಾರ್ಯಕ್ರಮ

Update: 2017-08-05 19:34 IST

ಮೂಡುಬಿದಿರೆ, ಆ. 5: ಇಲ್ಲಿನ ವಕೀಲರ ಸಂಘದಲ್ಲಿ ಚಾರ್ಟೆಡ್ ಎಕೌಂಟೆಂಟ್ ಆದ ಉಮೇಶ್ ರಾವ್ ರವರು ಮೂಡುಬಿದಿರೆಯ ವಕೀಲರಿಗೆ ಜಿ.ಎಸ್.ಟಿ. ಮತ್ತು ಆದಾಯ ತೆರಿಗೆಯ ಬಗ್ಗೆ ಮಾಹಿತಿ ನೀಡಿದರು. ಜಿ.ಎಸ್.ಟಿ ಯ ಜಾಗೃತಿ ರಿಟನ್ರ್ಸ್ ಅಪ್‍ಲೋಡ್ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಹಾಗೂ ಹೊಸ ನೀತಿಯ ಬಗ್ಗೆ ಸವಿವರವಾಗಿ ವಿವರಿಸಿದರು. ದೇಶದ ಬೆಳವಣಿಗೆಗೆ ಇದೊಂದು ಉತ್ತಮ ಬುನಾದಿ ಎಂದವರು  ವಿಶ್ಲೇಷಿಸಿದರು.  ವಕೀಲರಿಗೆ ಯಾವ ರೀತಿಯಲ್ಲಿ ಜಿ.ಎಸ್.ಟಿ ಅನ್ವಯವಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮೂಡುಬಿದಿರೆಯ ನ್ಯಾಯಾಲಯದ ನ್ಯಾಯಾಧೀಶೆ ಶ್ರೀಮತಿ ಅರುಣ ಕುಮಾರಿ ಮತ್ತು ಸರಕಾರಿ ಅಭಿಯೋಜಕರಾದ ದೇವೇಂದ್ರರವರು ಉಪಸ್ಥಿತರಿದ್ದರು.

ವಕೀಲರ ಸಂಘದ ಅಧ್ಯಕ್ಷರಾದ ಎಂ. ಬಾಹುಬಲಿ ಪ್ರಸಾದ್‍ರವರು ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಕೀಲರ ಸಂಘದ ಉಪಾಧ್ಯಕ್ಷರಾದ ನಾಗೇಶ್ ಶೆಟ್ಟಿ ಡಿ. ರವರು ಧನ್ಯವಾದವಿತ್ತರು. ಖಜಾಂಚಿ ಜಯ ಪ್ರಕಾಶ್ ಭಂಡಾರಿ ರವರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News