ಹಿಟ್ಯಾಚಿಯ ಬ್ಯಾಟರಿ, ಡಿಸೇಲ್ ಕಳವು
Update: 2017-08-05 20:57 IST
ಬ್ರಹ್ಮಾವರ, ಆ.5: ಬ್ರಹ್ಮಾವರ ಆಕಾಶವಾಣಿ ಜಂಕ್ಷನ್ ಬಳಿ ಜು.4ರಂದು ನಿಲ್ಲಿಸಿದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದ ಹಿಟ್ಯಾಚಿಯ ಬ್ಯಾಟರಿ ಹಾಗೂ ಡಿಸೇಲ್ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಹರೀಶ್ ಕುಲಾಲ್ ಎಂಬವರು ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಅಗಲೀಕ ರಣದ ಕಾಮಗಾರಿ ಮುಗಿಸಿ ಹಿಟ್ಯಾಚಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋಗಿದ್ದರು. ರಾತ್ರಿ ವೇಳೆ ಕಳ್ಳರು ಹಿಟ್ಯಾಚಿಯ 2 ಬ್ಯಾಟರಿ ಹಾಗೂ 80 ಲೀಟರ್ ಡಿಸೇಲ್‌ನ್ನು ಕಳವು ಮಾಡಿದ್ದಾರೆ. ಇದರ ಒಟ್ಟು ಮೌಲ್ಯ 15,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.