ಬ್ಲಡ್ ಹೆಪ್ಪ್ ಲೈನ್‌ನ ವಾರ್ಷಿಕ ಸಂಭ್ರಮ: ರಕ್ತದಾನ ಶಿಬಿರ
ಮಂಗಳೂರು, ಜು. 5: ಬ್ಲಡ್ ಹೆಪ್ಪ್ ಲೈನ್ ಕರ್ನಾಟಕ ಇದರ ಪ್ರಥಮ ವರ್ಷಾಚರಣೆಯ ಸಂಭ್ರಮ ಮತ್ತು ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಆ. 6ರಂದು ಬೆಳಗ್ಗೆ 9ಗಂಟೆಗೆ ಮಂಗಳೂರು ನಗರದ ಫೋರಂ ಫಿಝಾ ಮಾಲ್‌ನಲ್ಲಿ ನಡೆಯಲಿದೆ ಎಂದು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಎಡ್ಮಿನ್ ಇಫ್ತಿಕಾರ್ ಕೃಷ್ಟಾಪುರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಮತ್ತು ನಾಗರಿಕ ಸರಬರಜು ಸಚಿವ ಯು.ಟಿ ಖಾದರ್ ಕಾರ್ಯಕ್ರಮ ಉದ್ಘಾಟಿಸಲ್ಲಿದ್ದಾರೆ. ಮುಖ್ಯ ಆತಿಥಿಗಳಾಗಿ ಅರಣ್ಯ ಸಚಿವ ಬಿ.ರಮಾನಾಥ ರೈ, ಮಂಗಳೂರು ನಗರ ಪೋಲಿಸ್ ಆಯುಕ್ತ ಟಿ.ಆರ್.ಸುರೇಶ್, ಡಿಸಿಪಿ ಹನುಮಂತ ರಾಯ್, ಶಾಸಕರಾದ ಬಿ.ಎ.ಮೊಯ್ದಿನ್ ಬಾವ, ಜೆ.ಆರ್. ಲೋಬೋ, ಮೇಯರ್ ಕವಿತಾ ಸನಿಲ್, ಕರ್ನಾಟಕ ಮಹಿಳಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಪ್ರತಿಭಾ ಕುಳಾಯಿ, ಉದ್ಯಮಿ ಝಕರಿಯಾ ಜೋಕಟ್ಟೆ, ಫೋರಂ ಫಿಝಾ ಮಾಲ್‌ನ ಮಾಲಕ ಬಿ.ಎಂ.ಫಾರೂಖ್, ದ.ಕ. ಜಿಲ್ಲಾ ಎಸ್‌ಡಿಪಿಐ ಅಧ್ಯಕ್ಷ ಹನೀಫ್ ಖಾನ್ ಕೋಡಾಜೆ, ಗುರುಪುರ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ. ಇಬ್ರಾಹೀಂ, ಬ್ಲಡ್ ಹೆಲ್ಪ್‌ಲೈನ್ ಸಲಹೆಗಾರ ಮುಸ್ತಫಾ ಅಡ್ಡೂರು ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಎಡ್ಮಿನ್‌ಗಳಾದ ಇಮ್ರಾನ್ ಅಡ್ಡೂರು, ಮುಝಮ್ಮಿಲ್ ನೂಯಿ ಅಡ್ಡೂರು, ಸದಸ್ಯ ಬ್ಯಾರಿ ಝುಲ್ಫಿ, ಸಲಹೆಗಾರ ಮುಸ್ತಫಾ ಅಡ್ಡೂರು ದೆಮ್ಮಲೆ ಉಪಸ್ಥಿತರಿದರು.