ಪೊಳಲಿ ಅನಂತಭಟ್‌ರ ಕೃತಿ ‘ಪುಟ್ಟ ತಮ್ಮನ ಕಗ್ಗ’ ಬಿಡುಗಡೆ
Update: 2017-08-05 23:03 IST
ಮಂಗಳೂರು, ಆ. 5: ನಿವೃತ್ತ ಪ್ರಾಧ್ಯಾಪಕ, ಹಿರಿಯ ಪುರೋಹಿತ, ಕವಿ ಪೊಳಲಿ ಅನಂತಭಟ್ ಅವರು ಬರೆದಿರುವ ಕೃತಿ ‘ಪುಟ್ಟ ತಮ್ಮನ ಕಗ್ಗ’ ಬಿಡುಗಡೆ ಸಮಾರಂಭವು ಆ.9ರಂದು ಸಂಜೆ 5 ಗಂಟೆಗೆ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯಲ್ಲಿರುವ ಮಂಜು ಪ್ರಾಸಾದದ ವಾದಿರಾಜ ಮಂಟಪದಲ್ಲಿ ಜರಗಲಿದೆ.
ಕೃತಿಯನ್ನು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಬಿಡುಗಡೆಗೊಳಿಸಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಕಲ್ಕೂರ ಪ್ರತಿಷ್ಠಾನ ಮತ್ತು ದ.ಕ. ಜಿಲ್ಲಾ ಕನ್ನಡ ಸಾತ್ಯ ಪರಿಷತ್‌ನಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷ ಪಿ. ಜಯರಾಮ ಭಟ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.