×
Ad

ಪಾಕ್ ಸಂಪುಟದಲ್ಲಿ ಹಿಂದೂ ಸಚಿವ

Update: 2017-08-05 23:13 IST

ಹೊಸದಿಲ್ಲಿ, ಆ.5: ಎರಡು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಹಿಂದೂ ಸಮುದಾಯದವರೊಬ್ಬರು ಪಾಕಿಸ್ತಾನದ ಸಂಪುಟಕ್ಕೆ ಸಚಿವರಾಗಿ ಸೇರ್ಪಡೆಯಾಗಿದ್ದಾರೆ. 65 ವರ್ಷ ವಯಸ್ಸಿನ ಪಾಕ್ ರಾಜಕಾರಣಿ, ಹಿಂದೂ ಧರ್ಮೀಯರಾದ ದರ್ಶಲ್ ಲಾಲ್ ಅವರು ಶಹೀದ್ ಖಾಖನ್ ಅವರ ಸಂಪುಟದಲ್ಲಿ ಸಚಿವರಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಪಾಕಿಸ್ತಾನದ ನಾಲ್ಕು ಪ್ರಾಂತಗಳ ಸಮನ್ವಯ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ.

2013ರಲ್ಲಿ ಲಾಲ್ ಅವರು ಅಲ್ಪಸಂಖ್ಯಾತ ಮೀಸಲು ಕ್ಷೇತ್ರದಲ್ಲಿ ಪಿಎಂಎಲ್-ಎನ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ರಾಷ್ಟ್ರೀಯ ಅಸೆಂಬ್ಲಿ ಸದಸ್ಯರಾಗಿ ಅವರು ಆಯ್ಕೆಯಾಗಿರುವುದು ಇದು ಎರಡನೆ ಸಲವಾಗಿದೆ.ಮೂಲತ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯವರಾದ ಲಾಲ್, ವೈದ್ಯರಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News