ಕೇರಳದ ರಾಜಕೀಯ ಸಂಘರ್ಷ: ಇಂದು ಸರ್ವಪಕ್ಷ ಸಭೆ
Update: 2017-08-06 14:16 IST
ತಿರುವನಂತಪುರಂ,ಆ.6: ಕೇರಳದಲ್ಲಿ ರಾಜಕೀಯ ಸಂಘರ್ಷ ಮರಕಳಿಸದಿರಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆದಿರುವ ಸರ್ವಪಕ್ಷ ಸಭೆ ರವಿವಾರ ನಡೆಯಲಿದೆ. ಇಂದು ಮಧ್ಯಾಹ್ನ ಮೂರುಗಂಟೆಗೆ ತೈಕಾಡ್ ಗೆಸ್ಟ್ ಹೌಸ್‍ನಲ್ಲಿ ಸಭೆ ನಡೆಯಲಿದೆ.
ರಾಜ್ಯಪಾಲರ ಸೂಚನೆಯಂತೆ ಕಳೆದ ಸೋಮವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದಿದ್ದ ಸಿಪಿಎಂ, ಬಿಜೆಪಿ, ಆರೆಸ್ಸೆಸ್ ನಾಯಕರ ಸಭೆಯಲ್ಲಿ ಸರ್ವಪಕ್ಷಗಳ ಸಭೆಕರೆಯಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ಸಭೆಯನ್ನು ಮುಖ್ಯಮಂತ್ರಿ ಕರೆದಿದ್ದಾರೆ. ಸಿಪಿಎಂ-ಬಿಜೆಪಿ ಘರ್ಷಣೆ ನಡೆದ ತಿರುವನಂತಪುರಂ, ಕೋಟ್ಟಯಂ, ಕಣ್ಣೂರ್ ಜಿಲ್ಲೆಗಳಲ್ಲಿನಡೆಯಲಿರುವ ಸರ್ವಪಕ್ಷಗಳ ಸಭೆಗೆ ಪೂರ್ವಭಾವಿಯಾಗಿ ಶಾಂತಿ ಸಭೆ ನಡೆಯಲಿದೆ.