×
Ad

ಹೂಡೆಯಲ್ಲಿ ಮಕ್ಕಳ ಪ್ರೊ ಕಬಡ್ಡಿ

Update: 2017-08-06 16:38 IST

ಉಡುಪಿ, ಆ.6: ಮಕ್ಕಳಲ್ಲಿ ಕ್ರೀಡಾ ಸ್ಪೂರ್ತಿಯನ್ನು ಬೆಳೆಸುವ ಉದ್ದೇಶದಿಂದ ಎಸ್‌ಐಓ ಹೂಡೆ ಘಟಕದ ವತಿಯಿಂದ ಪ್ರೊ ಕಬಡ್ಡಿ ಮಾದರಿಯ ಪಂದ್ಯಾ ವಳಿಯನ್ನು ಹೂಡೆಯಲ್ಲಿ ರವಿವಾರ ಏರ್ಪಡಿಸಲಾಗಿತ್ತು.

ಪಂದ್ಯಾಟವನ್ನು ಸಾಲಿಹಾತ್ ಶಾಲೆಯ ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ ಉದ್ಘಾಟಿಸಿದರು. ಮೊಜೊ ಫಿಜ್ನ ಮಾಲಕ ಇರ್ಷಾದುಲ್ಲ ಆದಿಲ್, ಕಬಡ್ಡಿ ಪಟುಗಳಾದ ಅಲ್ತಾಫ್ ನಕ್ವಾ, ರಝಾಕ್ ನಕ್ವಾ, ಎಸ್‌ಐಓ ಹೂಡೆಯ ಅಧ್ಯಕ್ಷ ಫಯಿಮ್, ಐಸಿಸಿ ಅಧ್ಯಕ್ಷ ಮುಫೀದ್ ಉಪಸ್ಥಿತರಿದ್ದರು.

ಪಂದ್ಯಾವಳಿಯನ್ನು ಸೂಪರ್ ಜೂನಿಯರ್, ಜೂನಿಯರ್ ಮತ್ತು ಸಿನೀ ಯರ್ ವಿಭಾಗದಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಸೋತ ತಂಡಗಳಿಗೂ ಬಹುಮಾನವನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News