ಸ್ತನ್ಯಪಾನದ ಮಹತ್ವ ಕುರಿತು ಉಪನ್ಯಾಸ
ಉಡುಪಿ, ಆ.6: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಝಂಡು ಹೆಲ್ತ್ ಕೇರ್ ಡಿವಿಷನ್ ಸಹ ಪ್ರಾಯೋಜಕತ್ವದಲ್ಲಿ ‘ಸ್ತನ್ಯಪಾನ ಸಪ್ತಾಹ’ ಆಚರಣೆಯ ಪ್ರಯುಕ್ತ ‘ಶಿಶುವಿನ ಆರೋಗ್ಯದಲ್ಲಿ ಸ್ತನ್ಯಪಾನದ ಮಹತ್ವ ಹಾಗೂ ಸ್ತನ್ಯಪಾನದ ವಿಧಿವಿಧಾನಗಳು’ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಯಾಗಿ ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ವಿದ್ಯಾ ಬಲ್ಲಾಳ್ ಸ್ತನ್ಯಪಾನದ ಮಹತ್ವ ಮತ್ತು ವಿವಿಧ ವಿಧಾನಗಳ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಕಾಂತ್ ಯು. ಅಧ್ಯಕ್ಷತೆ ವಹಿಸಿದ್ದರು.
ಝಂಡು ಹೆಲ್ತ್‌ಕೇರ್ ಡಿವಿಷನ್‌ನ ಏರಿಯಾ ಸೇಲ್ಸ್ ಮೇನೇಜರ್ ವಿಠಲ್, ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಚೇತನ್ ಕುಮಾರ್, ಡಾ.ಶರಶ್ಚಂದ್ರ ಆರ್., ಡಾ.ನಾಗರತ್ನ ಎಸ್.ಜೆ., ಸಂಶೋಧನಾ ವಿಭಾಗದ ಅಧೀಕ್ಷಕ ಡಾ. ಬಿ.ರವಿಶಂಕರ್, ಪ್ರಸೂತಿ ವಿಭಾಗದ ಮುಖ್ಯಸ್ಥ ಡಾ.ವಿ.ಎನ್.ಕೆ.ಉಷಾ ಮೊದ ಲಾದವರು ಉಪಸ್ಥಿತರಿದ್ದರು.
ಬಾಲರೋಗ ವಿಭಾಗದ ಮುಖ್ಯಸ್ಥ ಡಾ.ಪ್ರಥ್ವಿರಾಜ್ ಪುರಾಣಿಕ್ ಸ್ವಾಗತಿಸಿ ದರು. ಡಾ.ಆಲ್ಮಸ್ ವಂದಿಸಿದರು. ಡಾ.ಕಾವ್ಯ ಕಾರ್ಯಕ್ರಮ ನಿರೂಪಿಸಿದರು.