×
Ad

ವಲಚ್ಚಿಲ್: ಶಿಕ್ಷಕ-ರಕ್ಷಕ ಸಭೆ

Update: 2017-08-06 18:07 IST

ಫರಂಗಿಪೇಟೆ, ಆ. 6: ಹಯಾತುಲ್ ಇಸ್ಲಾಮ್ ಮದರಸ ವಲಚ್ಚಿಲ್ ಪದವಿನಲ್ಲಿ ಶಿಕ್ಷಕ ರಕ್ಷಕರ ಸಭೆ ಇತ್ತೀಚೆಗೆ ನಡೆಯಿತು.

ಬದ್ರಿಯಾ ಜುಮಾ ಮಸೀದಿ ವಲಚ್ಚಿಲ್ ಪದವು ಆದಳಿತ ಸಮಿತಿಯ ಅಧ್ಯಕ್ಷ ಮುಹಮ್ಮದ್ ಮೋನು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಸೀದಿಯ ಖತೀಬ್ ಅಬ್ದುಲ್ ರಝಾಕ್ ದಾರಿಮಿ ಉದ್ಘಾಟನೆ ಮಾಡಿದರು. ಜಮ್ ಇಯ್ಯತುಲ್ ಮುಅಲ್ಲಿಮೀನ್ ಅಡ್ಯಾರ್ ಕಣ್ಣೂರು ರೇಂಜ್ ಅಧ್ಯಕ್ಷ ಅಬ್ದುರಶೀದ್ ಹನೀಫಿ ವಿಷಯ ಮಂಡಿಸಿದರು.

ಮದರಸದ ಸದರ್ ಮುಅಲ್ಲಿಮ್ ಬಂಡಾಡ್ ಸಿದ್ದೀಕ್ ಮೌಲವಿ ಪ್ರಾಸ್ತಾವಿಕ ಮಾತನಾಡಿದರು. ಮಸೀದಿಯ ಆಡಳಿತ ಸಮಿತಿ ಉಪಾಧ್ಯಕ್ಷ ಶಬೀರ್ ಸ್ವಾಗತಿಸಿ, ಮಹಮ್ಮದ್ ಮುಸ್ಲಿಯಾರ್ ಕಿರಾಅತ್ ಪಠಿಸಿ, ಇಕ್ಬಾಲ್ ಅಶ್ರಫಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News