ಅಮರನಾಥ ಯಾತ್ರಿಗಳ ಮೇಲಿನ ಭಯೋತ್ಪಾದಕ ದಾಳಿ ಪ್ರಕರಣ: ಮೂವರ ಬಂಧನ
Update: 2017-08-06 18:22 IST
ಹೊಸದಿಲ್ಲಿ, ಆ.6: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ವ್ಯಾಪ್ತಿಯಲ್ಲಿ ಅಮರನಾಥ ಯಾತ್ರಿಗಳ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಗೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ಐಜಿಪಿ ಮುನೀರ್ ಖಾನ್ ತಿಳಿಸಿದ್ದಾರೆ.
“ಲಷ್ಕರ್ ಎ ತೊಯ್ಬಾದ ಪಾಕಿಸ್ತಾನಿ ಉಗ್ರ ಇಸ್ಮಾಯೀಲ್ ಹಾಗೂ ಆತನ ಇಬ್ಬರು ಸಹಚರರು ಈ ದಾಳಿಯನ್ನು ನಡೆಸಿದ್ದರು. ದಾಳಿಯಲ್ಲಿ ಪಾಲ್ಗೊಂಡಿದ್ದ ಇನ್ನೂ ಇಬ್ಬರು ಪಾಕಿಸ್ತಾನಿ ಉಗ್ರರನ್ನು ಶೀಘ್ರ ಬಂಧಿಸಲಾಗುವುದು ಎಂದವರು ಹೇಳಿದ್ದಾರೆ”.
ಜುಲೈ 9ರಂದು ದಾಳಿ ನಡೆಸುವ ಯೋಜನೆ ಹಾಕಲಾಗಿತ್ತು. ಆದರೆ ಆ ದಿನ ಯಾವುದೇ ಸಿಆರ್ ಪಿಎಫ್ ಅಥವಾ ಯಾತ್ರಾರ್ಥಿಗಳ ವಾಹನ ಸಂಚರಿಸಿರಲಿಲ್ಲ. ಉಗ್ರರಿಗೆ ಮೂವರು ಸ್ಥಳೀಯರು ನೆರವಾಗಿದ್ದಾರೆ. ವಿಚಾರಣೆಯ ಸಂದರ್ಭ ಭಯೋತ್ಪಾದಕ ಕೃತ್ಯಕ್ಕೆ ನಡೆಸಿದ್ದ ಸಂಪೂರ್ಣ ಯೋಜನೆಯ ಬಗ್ಗೆ ಉಗ್ರರು ಬಾಯ್ಬಿಟ್ಟಿದ್ದಾರೆ” ಎಂದು ಮುನೀರ್ ಖಾನ್ ವಿವರಿಸಿದ್ದಾರೆ.