×
Ad

ರೈಲಿನಡಿಗೆ ಬಿದ್ದು ಐವರು ಮೃತ್ಯು: ಇಬ್ಬರಿಗೆ ಗಂಭೀರ ಗಾಯ

Update: 2017-08-06 19:46 IST

ರಾಜಸ್ತಾನ, ಆ.6: ರೈಲಿನಡಿಗೆ ಬಿದ್ದು ಐವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸವಿಮೋಧ್ಪುರ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಪ್ಲಾಟ್ ಫಾರ್ಮ್ ನಂಬರ್ 1ಕ್ಕೆ ಆಗಮಿಸಿದ್ದ ಜೈಪುರ್ ಬಯಾನಾ ಎಕ್ಸ್ ಪ್ರೆಸ್ ರೈಲಿನ ಪ್ರಯಾಣಿಕರು ಮೃತಪಟ್ಟವರು. ರೈಲಿನಲ್ಲಿ ನೂಕುನುಗ್ಗಲಿದ್ದು, ಪ್ಲಾಟ್ ಫಾರ್ಮ್ ನಲ್ಲಿ ಇಳಿಯುವ ಬದಲು ಕೆಲ ಪ್ರಯಾಣಿಕರು ಇನ್ನೊಂದು ಬಾಗಿಲಿನ ಮೂಲಕ ರೈಲ್ವೆ ಹಳಿಗಳ ಮೇಲೆ ಇಳಿದಿದ್ದಾರೆ. ಇದೇ ಸಂದರ್ಭ ಇನ್ನೊಂದು ಹಳಿಯಲ್ಲಿ ಬರುತ್ತಿದ್ದ ಗಾರ್ಭಾ ಎಕ್ಸ್ ಪ್ರೆಸ್ ಢಿಕ್ಕಿಯಾಗಿ ಐವರು ಮೃತಪಟ್ಟಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಕ್ಷಾಬಂಧನ ಆಚರಣೆಗೆ ಊರಿಗೆ ತೆರಳುವವರು ಹೆಚ್ಚಿದ್ದರಿಂದ ರೈಲಿನಲ್ಲಿ ನೂಕುನುಗ್ಗಲಿತ್ತು. ಮೃತಪಟ್ಟವರು ಹಾಗೂ ಗಾಯಗೊಂಡವರು ಹಬ್ಬ ಆಚರಿಸಲು ಜೈಪುರದಿಂದ ಬರುತ್ತಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News