ಮಣಿಪಾಲ: ರಾಷ್ಟ್ರೀಯ ಯುವ ಸಮ್ಮೇಳನ ಸಮಾರೋಪ
ಮಣಿಪಾಲ, ಆ.6: ಮಣಿಪಾಲ ವಿವಿ ವತಿಯಿಂದ ಮಣಿಪಾಲ ಕೆಎಂಸಿಯ ಡಾ.ಟಿ.ಎಂ.ಎ.ಪೈ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ‘ಸಾಮಾಜಿಕ ಬದಲಾ ವಣೆಯಲ್ಲಿ ಯುವವೃಂದ’ ಎಂಬ ವಿಷಯದ ಕುರಿತ ಎರಡು ದಿನಗಳ ರಾಷ್ಟ್ರೀಯ ಯುವ ಸಮ್ಮೇಳನದ ಸಮಾರೋಪ ಸಮಾರಂಭವು ರವಿವಾರ ಜರಗಿತು.
ಮುಖ್ಯ ಅತಿಥಿಯಾಗಿ ಅದಾನಿ ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ, ಯುವಕರು ಸಾಮಾಜಿಕ ಬದಲಾ ವಣೆಯ ಶಕ್ತಿಯಾಗಿದ್ದಾರೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.34ರಷ್ಟು ಯುವಕರಿದ್ದಾರೆ. ಭವಿಷ್ಯದಲ್ಲಿ ಭಾರತ ಬಲಿಷ್ಠ ದೇಶವಾಗಲು ಯುವ ಸಮು ದಾಯದ ಪಾತ್ರ ಬಹಳ ಮುಖ್ಯವಾಗಿದೆ. ನಾಗರಿಕ ಸಮಾಜದ ಜವಾಬ್ದಾರಿ ಯನ್ನು ಅರಿತುಕೊಳ್ಳುವ ಬಗ್ಗೆ ಯುವ ಸಮುದಾಯ ಮುಂದಾಗಬೇಕು ಎಂದು ಹೇಳಿದರು.
ಸಮುದಾಯದ ಅಭಿವೃದ್ಧಿಗೆ ಅದಾನಿ ಯುಪಿಸಿಎಲ್ ಗ್ರೂಪ್ ಈಗಾಗಲೇ 650 ಕೋಟಿ ರೂ.ಗೂ ಅಧಿಕ ಹಣವನ್ನು ಒದಗಿಸಿದೆ. ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ಸಾಕಷ್ಟು ನೆರವು ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಮಣಿಪಾಲ ವಿವಿ ಕುಲಸಚಿವ ಡಾ.ನಾರಾಯಣ ಸಭಾತ್ ಮಾತನಾಡಿ, ಭಾರತ ಯುವಕರ ರಾಷ್ಟ್ರವಾಗಿದ್ದು, ಯುವ ಸಮುದಾಯದ ಶಕ್ತಿ, ಸಾಮರ್ಥ್ಯ ವನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಬೇಕಾಗಿದೆ. ಯುವ ಸಮುದಾಯದ ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಸಮಾಜದ ಪ್ರಗತಿಗೆ ದುಡಿಯಬೇಕು ಎಂದು ಹೇಳಿದರು.
ವಿದ್ಯಾರ್ಥಿ ಸಂಚಾಲಕ ನವನೀತ್ ಉಪಾಧ್ಯಾಯ ಉಪಸ್ಥಿತರಿದ್ದರು. ಸಹ ಸಂಚಾಲಕ ಪ್ರವೀಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಯೋಜಕ ನಂದೀಶ್ ಸ್ವಾಗತಿಸಿದರು. ಸಮ್ಮೇಳನದ ಸಂಚಾಲಕ ಡಾ.ಅನೂಪ್ ನಾಹ ವಂದಿಸಿದರು. ದೇಶದ ವಿವಿಧ ಕಾಲೇಜುಗಳ 600ಕ್ಕೂ ಅಧಿಕ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.