ಕೊಚ್ಚಿಗೆ ಬಂದಿಳಿದ ಪಿಡಿಪಿ ನಾಯಕ ಮಅದನಿ
Update: 2017-08-06 19:48 IST
ಕೊಚ್ಚಿ, ಅ. 6: ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಪಿಡಿಪಿ ನಾಯಕ ಅಬ್ದುಲ್ ನಾಸರ್ ಮಅದನಿ ರವಿವಾರ ಸಂಜೆ ಕೊಚ್ಚಿಗೆ ಆಗಮಿಸಿದ್ದು, ನೆಡುಬಂಶ್ಶೇರಿಯಲ್ಲಿರುವ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಕೊಲ್ಲಂನ ಸಂಸಾಮ್‌ಕೊಟ್ಟಾದ ಸಮೀಪದ ಅನ್ವರ್‌ಶ್ಶೇರಿಯಲ್ಲಿರುವ ತನ್ನ ಮನೆಗೆ ರಸ್ತೆ ಮೂಲಕ ಮಅದನಿ ಪ್ರಯಾಣಿಸಿದ್ದು, ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಆಗಸ್ಟ್ 9ರಂದು ತನ್ನ ಪುತ್ರನ ವಿವಾಹದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಕೋರಿ ಮಅದನಿ ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.