ಪಿಂಚಣಿ ಆರಂಭಿಸಲು ಸರಕಾರಿ ನೌಕರರು ಬ್ಯಾಂಕ್‌ಗೆ ಭೇಟಿ ನೀಡುವ ಅಗತ್ಯ ಇಲ್ಲ: ಕೇಂದ್ರ ಸರಕಾರ
ಹೊಸದಿಲ್ಲಿ, ಆ.6: ಕೇಂದ್ರ ಸರಕಾರಿ ನೌಕರರು ಪಿಂಚಣಿ ಪ್ರಾರಂಭಿಸಲು ಬ್ಯಾಂಕ್‌ಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ನಿವೃತ್ತಿಯ ಸಂದರ್ಭ ಸರಕಾರಿ ನೌಕರರಿಗೆ ಪಿಂಚಣಿ ಪಾವತಿ ಆದೇಶ ನೀಡಲಾಗುತ್ತದೆ ಎಂದು ಸಿಬ್ಬಂದಿ ಹಾಗೂ ತರಬೇತಿ ಸಚಿವಾಲಯ ತಿಳಿಸಿದೆ.
ಇದಕ್ಕೆ ಸಂಬಂಧಿಸಿ ಪ್ರಸ್ತುತ ಅಸ್ತಿತ್ವದಲ್ಲಿರುವ ನಿಯಮಗಳನ್ನು ಉಲ್ಲೇಖಿಸಿದ ಸಚಿವಾಲಯ, ಕೇಂದ್ರ ಸರಕಾರದ ಎಲ್ಲ ಇಲಾಖೆಗಳಿಗೆ ಆದೇಶ ನೀಡಲಾಗಿದೆ. ಸರಕಾರಿ ನೌಕರರು ತಮ್ಮ ನಿವೃತ್ತಿಯ ಮೊದಲ ಪಿಂಚಣಿ ಪಡೆಯಲು ಬ್ಯಾಂಕ್‌ಗಳಿಗೆ ಭೇಟಿ ನೀಡುವುದು ಇನ್ನು ಮುಂದೆ ಅಗತ್ಯವಿಲ್ಲ ಎಂದಿದೆ.
ಪಿಂಚಣಿ ಅರ್ಜಿ ಸಲ್ಲಿಸುವಾಗ ತಮ್ಮ ಆಯ್ಕೆಯ ಬ್ಯಾಂಕ್‌ನ ಕೇಂದ್ರ ಕಚೇರಿಯನ್ನು ನಮೂದಿಸಲು ಅವಕಾಶ ನೀಡಲಾಗಿದ್ದು, ಪಿಂಚಣಿ ಪಾವತಿ ಆರ್ಡರ್ ಅನ್ನು ನಿವೃತ್ತರಾಗುವ ಸಂದರ್ಭ ನೀಡಲಾಗುತ್ತದೆ.
ನೌಕರನ ನಿವೃತ್ತಿಯ ಬಳಿಕ ನೀಡಬೇಕಾಗಿರುವುದರೊಂದಿಗೆ ಪಿಂಚಣಿ ಪಾವತಿ ಆರ್ಡರ್‌ನ ಒಂದು ಪ್ರತಿಯನ್ನು ಬ್ಯಾಂಕ್‌ಗೆ ಕಳುಹಿಸಲಾಗುವುದು. ಹಾಗೂ ಇನ್ನೊಂದು ಪ್ರತಿಯನ್ನು ನಿವೃತ್ತ ಉದ್ಯೋಗಿಗೆ ಹಸ್ತಾಂತರಿಸಲಾಗುವುದು ಎಂದು ಆದೇಶ ತಿಳಿಸಿದೆ.
ಈ ಹಿಂದೆ ಹಲವು ಸಂದರ್ಭ ಪಿಂಚಣಿ ಆದೇಶದ ಪ್ರತಿಯನ್ನು ನಿವೃತ್ತರಿಗೆ ಹಸ್ತಾಂತರಿಸುವ ಬದಲು ಬ್ಯಾಂಕ್‌ಗೆ ರವಾನಿಸಲಾಗುತ್ತಿತ್ತು. ಇದು ಕೆಲವೊಮ್ಮೆ ಸಾಗಾಟದ ಸಂದರ್ಭ ಕಳೆದು ಹೋಗುತ್ತಿತ್ತು. ಇದರಿಂದ ನಿವೃತ್ತ ಸರಕಾರಿ ನೌಕರರು ತೊಂದರೆ ಅನುಭವಿಸುತ್ತಿದ್ದರು. ಆಗಸ್ಟ್ 1ರಿಂದ ಈ ಹೊಸ ಆದೇಶ ನೀಡಲಾಗಿದೆ ಎಂದು ಅದು ತಿಳಿಸಿದೆ.