ಜಮ್ಮು ಕಾಶ್ಮೀರ: ಸಿಆರ್ ಪಿಎಫ್ ಯೋಧರೊಂದಿಗೆ ರಕ್ಷಾ ಬಂಧನ ಆಚರಿಸಿದ ವಿದ್ಯಾರ್ಥಿನಿಯರು
Update: 2017-08-06 20:05 IST
ಉಧಮ್ ಪುರ, ಆ.6: ಅಮರನಾಥ ಯಾತ್ರೆಯ ಭದ್ರತೆಗಾಗಿ ನಿಯೋಜಿಸಲಾಗಿರುವ ಸಿಆರ್ ಪಿಎಫ್ ಯೋಧರೊಂದಿಗೆ ಜಮ್ಮು ಕಾಶ್ಮೀರದ ಉಧಮ್ ಪುರ ಜಿಲ್ಲೆಯ ಶಾಲೆಯೊಂದರ ಮಕ್ಕಳು ರಕ್ಷಾ ಬಂಧನವನ್ನು ಆಚರಿಸಿದ್ದಾರೆ,
ಕಳೆದ 40 ದಿನಗಳಿಂದ ಉಧಮ್ ಪುರದಲ್ಲಿರುವ, ಅಮರನಾಥ ಯಾತ್ರೆಯ ಭದ್ರತೆಗಾಗಿ ನಿಯೋಜನೆಯಾಗಿರುವ ಯೋಧರ ಕ್ಯಾಂಪ್ ಗೆ ಆಗಮಿಸಿದ ವಿದ್ಯಾರ್ಥಿನಿಯರು ಯೋಧರಿಗೆ ರಾಖಿ ಕಟ್ಟಿದರು. ಶನಿವಾರ ಜಮ್ಮು ಕಾಶ್ಮೀರದ ಆರ್ ಎಸ್ ಪುರ ಸೆಕ್ಟರ್ ನಲ್ಲಿ ಮಹಿಳೆಯರು ಯೋಧರೊಂದಿಗೆ ರಕ್ಷಾ ಬಂಧನ ಆಚರಿಸಿದ್ದರು.