ಜಾನುವಾರು ಕಳವು ಆರೋಪ: ಇಬ್ಬರ ಬಂಧನ
Update: 2017-08-06 21:19 IST
ಬೆಳ್ತಂಗಡಿ, ಆ. 6: ಬೆಳಾಲು ಗ್ರಾಮದಲ್ಲಿ ಜಾನುವಾರು ಕಳವು ಮಾಡಲು ಯತ್ನಿಸಿ ತಲೆ ಮರೆಸಿಕೊಂಡಿದ್ದರು ಎನ್ನಲಾದ ಇಬ್ಬರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನಡ ಗ್ರಾಮದ ನಿವಾಸಿಗಳಾದ ಮುಹಮ್ಮದ್ ಸಾಲಿ ಹಾಗೂ ರಿಯಾಝ್ ಯಾನೆ ಹಾರಿಸ್ ಎಂದು ಗುರುತಿಸಲಾಗಿದೆ. ಆರೋಪಿಗಳು ಜುಲೈ 30ರಂದು ಬೆಳಾಲು ಗ್ರಾಮದ ನಿವಾಸಿ ದರ್ಣಮ್ಮ ಎಂಬವರ ಮನೆಯ ಹಟ್ಟಿಗೆ ನುಗ್ಗಿ ದನ ಕಳ್ಳತನಕ್ಕೆ ಪ್ರಯತ್ನಿಸಿ, ಪರಾರಿಯಾಗಿದ್ದರು ಎಂದು ದೂರು ನೀಡಲಾಗಿತ್ತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ಹದಿನೈದು ದಿನಗಳ ನ್ಯಾಯಾಂಗಬಂಧನ ವಿಧಿಸಿದೆ.