×
Ad

ಕೋಳಿ ಅಂಕ: ನಾಲ್ವರ ಬಂಧನ

Update: 2017-08-06 21:58 IST

ಕುಂದಾಪುರ, ಆ.6: ಕೋಟೇಶ್ವರ ಗಂಧರ್ವ ಬಾರ್‌ನ ಹಿಂಭಾಗದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ನಾಲ್ವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

  ವಕ್ವಾಡಿಯ ನಾರಾಯಣ ಮೊಗವೀರ(37), ದಯಾನಂದ ಪೂಜಾರಿ(37), ಮಧ್ಯಕೋಡಿಯ ಶರತ್ ಪೂಜಾರಿ(20), ಜಪ್ತಿಯ ಸಚಿನ್ ಶೆಟ್ಟಿ(21) ಬಂಧಿತರು. ಇವರಿಂದ 1,500ರೂ. ನಗದು, 2 ಹುಂಜ ಕೋಳಿಗಳು, 2 ಬಾಳು ಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News