×
Ad

​ಪತಂಜಲಿ ಕಂಪೆನಿಯ ಹೆಸರಿನಲ್ಲಿ ಲಕ್ಷಾಂತರ ರೂ. ಮೋಸ

Update: 2017-08-06 22:18 IST

ಮಲ್ಪೆ, ಆ.6: ಪತಂಜಲಿ ಕಂಪೆನಿಯ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ 3.27ಲಕ್ಷ ರೂ. ಮೋಸ ಮಾಡಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೆಂಕನಿಡಿಯೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ಪವನ್ ಜಯಕರ್ ಕೋಟ್ಯಾನ್ ಎಂಬವರು ಪತಂಜಲಿ ಆಯುರ್ವೇದಿಕ್ ಡಿಸ್ಟ್ರೀಬ್ಯೂ ಟರ್‌ಗಾಗಿ ಜೂ.20ರಂದು ‘ಪತಂಜಲಿ ಆಯುವೇರ್ದಿಕ್ ಡಾಟ್ ಒಆರ್‌ಜಿ’ ಎಂಬ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ಜು.21ರಂದು ಅರ್ಜಿ ಸ್ವೀಕೃತಗೊಂಡಿದೆ ಎಂಬುದಾಗಿ ಡುಮ್ಮಿ ಪತಂಜಲಿ ಆಯುರ್ವೇದಿಕ್ ಒಆರ್‌ಜಿನಿಂದ ಪವನ್ ಅವರ ಇಮೇಲ್ ಐಡಿಗೆ ಸಂದೇಶ ಬಂದಿದೆ.

ಪವನ್ ಅದರಲ್ಲಿರುವ ವಾಟ್ಸಪ್ ನಂಬರಿಗೆ ರಿಸುಮ್ ಕಳುಹಿಸಿದಾಗ ವ್ಯಕ್ತಿ ಯೊಬ್ಬರು ಪವನ್‌ರ ಮೊಬೆಲ್ ಕರೆ ಮಾಡಿ ಪತಂಜಲಿ ಕಂಪೆನಿಗೆ ರಿಜಿಸ್ಟರ್ ಆಗಲು 15,500 ರೂ. ಹಾಗೂ 75,000 ರೂ. ಮತ್ತು ಪತಂಜಲಿಯ ಸಾಮಗ್ರಿಗಳನ್ನು ಪಡೆಯಲು 1.80ಲಕ್ಷ ರೂ. ನೀಡಬೇಕೆಂದು ತಿಳಿಸಿದ್ದನು. ಅದರಂತೆ ಪವನ್ ಜು.6ರಂದು 75,000ರೂ. ಹಣವನ್ನು ಪತಂಜಲಿ ಆಯು ರ್ವೇದಿಕ್ ಕಂಪೆನಿಗೆ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗೆ ರಿಜಿಸ್ಟರ್ ಫೀಸ್ ಎಂದು 15,500ರೂ. ಹಣವನ್ನು ಹಾಕಿದ್ದಾರೆ. ಅಲ್ಲದೆ ಅವರು ದಾಖಲಾತಿಯನ್ನು ಕೂಡ ಇಮೇಲ್ ಮೂಲಕ ಕಳುಹಿಸಿದ್ದರು. ನಂತರ ಪವನ್ ಹಲವು ಬಾರಿ ತನ್ನ ತಾಯಿಯ ಖಾತೆಯಿಂದ ಹಣ  ಹಾಕಿದ್ದು, ಆದರೂ ಮತ್ತೆ ಮತ್ತೆ ಖಾತೆಗೆ ಹಣ ಹಾಕುವಂತೆ ತಿಳಿಸಿದ್ದರಿಂದ ಅನುಮಾನಗೊಂಡ ಪವನ್ ಪತಂಜಲಿ ಆಯುರ್ವೇದಿಕ್‌ನ ಎಕ್ಸಿಕ್ಯೂಟಿವ್‌ಗೆ ಕರೆ ಮಾಡಿ ವಿಚಾರಿಸಿದರು.

ಪತಂಜಲಿ ಆಯುರ್ವೇದಿಕ್ ಕಂಪೆನಿಯ ವೆಬ್ಸೈಟ್ ಲಿಂಕ್, ವಿಳಾಸ, ಶೀಲು ಮತ್ತು ಸಿಇಒ ಅವರ ಸಹಿ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಯನ್ನು ದುರ್ಬಳಕೆ ಮಾಡಿಕೊಂಡು ನಕಲಿ ಟೋಲ್ ಫ್ರೀ ಹಾಗೂ ನಕಲಿ ರಿಜಿಸ್ಟರ ಫಾರಂ ಸೃಷ್ಟಿಸಿ ಇಮೇಲ್ ಹಾಗೂ ಆನ್‌ಲೈನ್ ನೆಫ್ಟ್ ಮೂಲಕ ಪತಂಜಲಿ ಕಂಪೆನಿಯ ಹೆಸರಿನಲ್ಲಿ ಪವನ್‌ಗೆ ಒಟ್ಟು 3.27 ಲಕ್ಷ ರೂ. ಮೋಸ ಮಾಡಿರುವುದು ತಿಳಿದುಬಂತು ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News