ಆ.12ರಂದು ಹಾಜಿ ಅಬ್ದುಲ್ಲಾ ಟ್ರಸ್ಟ್ ಉದ್ಘಾಟನೆ
ಉಡುಪಿ, ಆ.7: ಶಿಕ್ಷಣ, ಆರೋಗ್ಯ ಮತ್ತು ಕೋಮು ಸೌಹಾರ್ದತೆಯ ಉದ್ದೇಶದೊಂದಿಗೆ ಸ್ಥಾಪಿಸಿರುವ ಹಾಜಿ ಅಬ್ದುಲ್ಲಾ ಟ್ರಸ್ಟ್ ಉದ್ಘಾಟನೆ ಮತ್ತು ಹಾಜಿ ಅಬ್ದುಲ್ಲಾ ಸಂಸ್ಮರಣಾ ಸಮಾರಂಭವನ್ನು ಆ.12ರಂದು ಸಂಜೆ 4ಗಂಟೆಗೆ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಆಯೋಜಿಸಲಾಗಿದೆ.
ಅಧ್ಯಕ್ಷತೆಯನ್ನು ಹಾಜಿ ಅಬ್ದುಲ್ಲಾರ ಸಂಬಂಧಿ ಹಾಗೂ ನಿವೃತ್ತ ಎಲ್‌ಐಸಿ ಅಧಿಕಾರಿ ಖುರ್ಷಿದ್ ಅಹ್ಮದ್ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಪ್ರೊ.ಮುರಳೀಧರ ಉಪಾಧ್ಯಾಯ, ಹಾಜಿ ಅಬ್ದುಲ್ಲಾರ ನಿಕಟವರ್ತಿ ಪದ್ಮನಾಭ ನಾಯಕ್, ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ, ಮನೋರೋಗ ತಜ್ಞ ಡಾ.ಪಿ.ವಿ. ಭಂಡಾರಿ, ಫಣಿರಾಜ್, ಬಾಲಕೃಷ್ಣ ಶೆಟ್ಟಿ ಭಾಗವಹಿಸಲಿರುವರು.
ಈ ಸಂದರ್ಭದಲ್ಲಿ ಹಾಜಿ ಅಬ್ದುಲ್ಲಾ ಹೆರಿಟೇಜ್ ಮ್ಯೂಸಿಯಂನ ಗೈಡ್ ಕೃಷ್ಣಯ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ಹಾಜಿ ಅಬ್ದುಲ್ಲಾರ ಕುಟುಂಬ ಸ್ಥರಾದ ಸಿರಾಜ್ ಅಹ್ಮದ್ ಹಾಗೂ ಇಕ್ಬಾಲ್ ಮನ್ನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.