×
Ad

ಕಾರ್ಕಳ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

Update: 2017-08-07 19:54 IST

ಉಡುಪಿ, ಆ.7: ಈ ಸಾಲಿನ ಕಾರ್ಕಳ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ ಆ.20ರಂದು ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಈ ಕೆಳಗಿನ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಭಾಗವಹಿಸಲು ಇಚ್ಛಿಸುವ ಸ್ಪರ್ಧಿಗಳು ಆ.20ರ ಬೆಳಗ್ಗೆ 9 ಗಂಟೆಯೊಳಗೆ ಸಂಘಟಕರಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಪುರುಷರಿಗೆ: ಅಥ್ಲೆಟಿಕ್ಸ್-100ಮೀ, 200ಮೀ, 400ಮೀ, 800ಮೀ, 1500ಮೀ, 5000ಮೀ, ಉದ್ದಜಿಗಿತ, ಎತ್ತರಜಿಗಿತ, ಗುಂಡೆಸೆತ, ಟ್ರಿಪಲ್ ಜಂಪ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, 110 ಮೀ ಹರ್ಡಲ್ಸ್, 100 ಮೀ. ರಿಲೇ, 400 ಮೀ. ರಿಲೇ. ಗುಂಪು ಆಟಗಳು- ವಾಲಿಬಾಲ್, ಕಬಡ್ಡಿ, ಖೋ-ಖೋ, ಫುಟ್ಬಾಲ್, ಬಾಲ್‌ಬ್ಯಾಡ್ಮಿಂಟನ್, ತ್ರೋಬಾಲ್.

ಮಹಿಳೆಯರಿಗೆ: ಅಥ್ಲೆಟಿಕ್ಸ್- 100ಮೀ, 200ಮೀ, 400ಮೀ, 800ಮೀ, 1500ಮೀ, 3000ಮೀ, ಉದ್ದಜಿಗಿತ, ಎತ್ತರಜಿಗಿತ, ಗುಂಡೆಸೆತ, ಟ್ರಿಪಲ್ ಜಂಪ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, 110 ಮೀ ಹರ್ಡಲ್ಸ್, 100 ಮೀ ರಿಲೇ, 400ಮೀ ರಿಲೇ. ಗುಂಪು ಆಟಗಳು-ವಾಲಿಬಾಲ್, ಕಬಡ್ಡಿ, ಖೋ-ಖೋ, ಬಾಲ್‌ಬ್ಯಾಡ್ಮಿಂಟನ್, ತ್ರೋಬಾಲ್.

 ಹೆಚ್ಚಿನ ಮಾಹಿತಿಗಳಿಗೆ ಫ್ರೆಡ್ರಿಕ್ ರೆಬೆಲ್ಲೋ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಕಳ, ಮೊಬೈಲ್:9945364823ನ್ನು ಸಂಪರ್ಕಿಸುವಂತೆ ಕ್ರೀಡಾ ಇಲಾಖೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News