×
Ad

ನೆಹರು ಯುವ ಕೇಂದ್ರದಿಂದ ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧನೆ

Update: 2017-08-07 19:58 IST

ಉಡುಪಿ, ಆ.7: ನೆಹರು ಯುವ ಕೇಂದ್ರ ಉಡುಪಿ, ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಗಳಲ್ಲಿ ಒಂದಾಗ ಸ್ವಚ್ಛ ಭಾರತ ಅಭಿಯಾನದಡಿ ಆ.1ರಿಂದ 15ರವರೆಗೆ ಜಿಲ್ಲೆಯ ಹಲವು ಯುವಕ/ಯುವತಿ ಮಂಡಳಿಗಳ ಜೊತೆಗೆ ಸೇರಿ ಎರಡು ವಾರಗಳ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದೆ.

ಉಡುಪಿ ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ವಿಲ್ಪ್ರೆಡ್ ಡಿ’ಸೋಜ ಅವರು ನೆಹರು ಯುವ ಕೇಂದ್ರದ ಸ್ವಯಂಸೇವಕರ ಸಹಾಯದಿಂದ ಉಡುಪಿ ಜಿಲ್ಲೆಯ ಹಲವಾರು ಕಡೆ ಸ್ವಚ್ಛತಾ ಕಾರ್ಯಕ್ರಮಗಳ ಬಗ್ಗೆ ಜನಜಾಗೃತಿ ಹಾಗೂ ಸಂಘಸಂಸ್ಥೆಗಳಿಂದ ಸ್ವಯಂಸೇವೆ, ಶ್ರಮದಾನ ಹಾಗೂ ಸ್ವಚ್ಛತ ಅಭಿಯಾನಗಳನ್ನು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಸಾಮಾಜಿಕ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ರಾಷ್ಟ್ರಹಿತದ ಈ ಕಾರ್ಯಕ್ರಮಕ್ಕೆ ಗ್ರಾಮೀಣ ಯುವಕ/ಯುವತಿ ಮಂಡಳಿ ಗಳಿಂದ ಒಳ್ಳೆಯ ಸ್ಪಂದನೆ ಹಾಗೂ ಸಹಕಾರ ದೊರೆಯುತ್ತಿದ್ದು, ಇದರಿಂದ ಸಮಾಜದ ಎಲ್ಲಾ ವರ್ಗದ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರದ ಶುಚಿತ್ವ ಕಾಪಾಡಲು ಸಾದ್ಯವಾಗಿದೆ. ಇದರೊಂದಿಗೆ ಬಹಳಷ್ಟು ಕಡೆಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿದೆ ಎಂದು ಡಿಸೋಜ ತಿಳಿಸಿದ್ದಾರೆ. ರಾಷ್ಟ್ರಹಿತದ ಈ ಕಾರ್ಯಕ್ರಮಕ್ಕೆ ಗ್ರಾಮೀಣ ಯುವಕ/ಯುವತಿ ಮಂಡಳಿ ಗಳಿಂದ ಒಳ್ಳೆಯ ಸ್ಪಂದನೆ ಹಾಗೂ ಸಹಕಾರ ದೊರೆಯುತ್ತಿದ್ದು, ಇದರಿಂದ ಸಮಾಜದ ಎಲ್ಲಾ ವರ್ಗದ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರದ ಶುಚಿತ್ವ ಕಾಪಾಡಲು ಸಾದ್ಯವಾಗಿದೆ. ಇದರೊಂದಿಗೆ ಬಹಳಷ್ಟು ಕಡೆಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿದೆ ಎಂದು ಡಿಸೋಜ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಆ.2ರಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಆವರಣ ದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಉಡುಪಿ ಜಿಲ್ಲಾಡಳಿತ ವತಿಯಿಂದ ನಡೆದ ಘನತ್ಯಾಜ್ಯ ಮತ್ತು ದ್ರವ್ಯತ್ಯಾಜ್ಯ ನಿರ್ವಹಣೆ ಕಾರ್ಯಗಾರ-2017ರ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಪಂ ಅಧ್ಯಕ್ಷರು,ಉಪಾಧ್ಯಕ್ಷರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿ ಗಳೊಂದಿಗೆ ಶಿಬಿರಾರ್ಥಿಗಳು ಸಹ ಸ್ವಚ್ಛತಾ ಪ್ರತಿಜ್ಞೆಯನ್ನು ಸ್ವೀಕರಿಸಿದರು ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News