ವರ್ಕ್‌ಶಾಪ್‌ನಲ್ಲಿದ್ದ ವಾಹನಗಳ ಸೊತ್ತು ಕಳವು
Update: 2017-08-07 22:01 IST
ಕಾರ್ಕಳ, ಆ.7: ಪುಲ್ಕೇರಿಯ ಪಾಯಸ್ ಆಟೋ ಸೆಂಟರ್ ವರ್ಕ್ ಶಾಪ್ ನಲ್ಲಿ ರಿಪೇರಿಗೆ ನಿಲ್ಲಿಸಿದ್ದ ವಾಹನಗಳ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
11 ನಾಲ್ಕು ಚಕ್ರಗಳ ವಾಹನಗಳಿಗೆ ಅಳವಡಿಸಿದ 10 ಬ್ಯಾಟರಿ, ಮೂರು ಸ್ಟಿರಿಯೋ, ಎರಡು ಪೋಕ್ ಲ್ಯಾಂಪ್, ಎರಡು ಡಿಸ್ಕ್ ಸಹಿತ ಟಯರ್, ಒಂದು ಇಂಜಿನ್ ಸೇರಿದಂತೆ ಇತರ ಸೊತ್ತುಗಳನ್ನು ಕಳವು ಮಾಡಲಾಗಿದೆ.
ಅಲ್ಲದೆ 2 ವಾಹನಗಳನ್ನು ಜಖಂಗೊಳಿಸಲಾಗಿದ್ದು, ಇವುಗಳಿಂದ 26,000ರೂ. ನಷ್ಟ ಉಂಟಾಗಿದೆ. ವರ್ಕ್‌ಶಾಪ್‌ನ ಮಾಲಕ ವಿಲ್ಫ್ರೇಡ್ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.