ಮಗಳ ಚಿಂತೆಯಲ್ಲಿ ತಾಯಿ ಆತ್ಮಹತ್ಯೆ
Update: 2017-08-07 22:02 IST
ಕೋಟ, ಆ.7: ಮಗಳು ಮನೆಬಿಟ್ಟು ಹೋದ ಚಿಂತೆಯಲ್ಲಿ ಮಾನಸಿಕವಾಗಿ ನೊಂದ ತಾಯಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಡಾಡಿ ಮತ್ಯಾಡಿ ಗ್ರಾಮದ ಕಾಸನಮಕ್ಕಿ ಎಂಬಲ್ಲಿ ನಡೆದಿದೆ.
ಮೃತರನ್ನು ಯಡಾಡಿ ಮತ್ಯಾಡಿ ಗ್ರಾಮದ ಕಾಸನಮಕ್ಕಿ ನಿವಾಸಿ ಸೀತಾ(55) ಎಂದು ಗುರುತಿಸಲಾಗಿದೆ. ಇವರ ಮಗಳು ಲಲಿತಾ ಎಂಬಾಕೆ ಕಳೆದ ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ನಂತರ ಪತ್ತೆಯಾದ ಆಕೆ ತಾನು ಬೆಂಗಳೂರಿನಲ್ಲಿಯೇ ಇರುವುದಾಗಿ ಮನೆಯನ್ನು ಬಿಟ್ಟು ಹೋಗಿದ್ದಳು. ಇದೇ ಚಿಂತೆಯಲ್ಲಿ ತಾಯಿ ಸೀತಾ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.