ಯುವಕನ ಸರ ಅಹರಣಕ್ಕೆ ಯತ್ನ
Update: 2017-08-07 22:04 IST
ಬೈಂದೂರು, ಆ.7: ನಾಗೂರು ಬಸ್ ನಿಲ್ದಾಣದ ಸಮೀಪ ಬಸ್‌ಗಾಗಿ ಕಾಯುತ್ತಿದ್ದ ಯುವಕನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅಪರಿಚಿತನೋರ್ವ ಅಪಹರಿಸಲು ಯತ್ನಿಸಿರುವ ಘಟನೆ ನಡೆದಿದೆ.
ಕಿರಿಮಂಜೇಶ್ವರ ಗ್ರಾಮದ ನಾಗೂರು ನಿವಾಸಿ ಹೆರಿಯ ಎಂಬವರ ಮಗ ಸುಧೀಂದ್ರ(24) ಎಂಬವರು ಕುಂದಾಪುರಕ್ಕೆ ಹೋಗಲು ನಾಗೂರು ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿರುವಾಗ ಕಂಬದಕೋಣೆ ಕಡೆಯಿಂದ ಬೈಕಿನಲ್ಲಿ ಬಂದ 20ರಿಂದ 25 ವರ್ಷ ಪ್ರಾಯದ ವ್ಯಕ್ತಿ, ಬಸ್ ನಿಲ್ದಾಣದ ಬಳಿ ಬೈಕ್ ನಿಲ್ಲಿಸಿ ಸುಧೀಂದ್ರರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಳ್ಳಲು ಪ್ರಯತ್ನಿಸಿದನು.
ಆಗ ಸುಧೀಂದ್ರ ಬೊಬ್ಬೆ ಹಾಕಿದ್ದು, ಈ ಸಂದರ್ಭ ಅಪರಿಚಿತ ವ್ಯಕ್ತಿ ಬೈಕ್ ಸಮೇತ ಪರಾರಿಯಾದನು. ಕಪ್ಪುಮೈಬಣ್ಣ ಹೊಂದಿರುವ ಆ ವ್ಯಕ್ತಿ, ಕಪ್ಪು ಬಣ್ಣದ ಟಿಶರ್ಟ್ ಹಾಗೂ ಕಪ್ಪುಬಣ್ಣದ ಪ್ಯಾಂಟ್ ಧರಿಸಿದ್ದನು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.