×
Ad

​ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ

Update: 2017-08-07 22:05 IST

ಉಡುಪಿ, ಆ.7: ಉಡುಪಿ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯಲ್ಲಿ ನಡೆಸುತ್ತಿದ್ದ  ವ್ಯವಹಾರದಲ್ಲಿ ನಷ್ಟ ಅನುಭವಿಸಿ ಖಿನ್ನತೆಗೆ ಒಳಗಾಗಿದ್ದ ಉಡುಪಿಯ ನೇಜಾರಿನಲ್ಲಿ ವಾಸವಾಗಿರುವ ಶಿವಮೊಗ್ಗ ಸೊರಬದ ವೇಣುಗೋಪಾಲ ಎಂಬವರ ಮಗ ಗಿರೀಶ್ ನಾಯರ್(29) ಮೇ 18ರಂದು ರಾತ್ರಿ ಸೊರಬದ ಮನೆಗೆ ಹೊರಟವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಕಾಬೆಟ್ಟು ಅತ್ತೂರು ಕ್ರಾಸ್ ರಸ್ತೆಯ ಶೀತಲ್ ಬಾರ್ ಬಳಿಯ ನಿವಾಸಿ ಅಬ್ದುಲ್ ರಹೀಂ ಎಂಬವರ ಮಗಳು ತಸ್ನೀಮ್ ರುಮನಾ(17) ಎಂಬಾಕೆ ಆ.5ರಂದು ಮಧ್ಯಾಹ್ನ ಮನೆಯಿಂದ ಕಾಬೆಟ್ಟುವಿನಲ್ಲಿರುವ ಕಟ್ಟಿಂಗ್ ಕ್ಲಾಸ್‌ಗೆ ಹೋದವಳು ಈತನಕ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿ ದ್ದಾಳೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News