×
Ad

ರೈಲಿನಲ್ಲಿ ಲೂಟಿ: ದಂಪತಿ ಚೇತರಿಕೆ

Update: 2017-08-07 22:11 IST

ಉಡುಪಿ, ಆ.7: ರೈಲಿನಲ್ಲಿ ವಂಚಕ ಯುವಕರಿಂದ ಅಮಲು ಪದಾರ್ಥ ಬೆರೆಸಿದ ಸೂಪನ್ನು ಸೇವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂಜೀವ ಶೆಟ್ಟಿ(62) ಹಾಗೂ ರತ್ನ ಶೆಟ್ಟಿ(56) ಇದೀಗ ಮಣಿಪಾಲ ಆಸ್ಪತ್ರೆಯಲ್ಲಿ ಚೇತರಿಸಿ ಕೊಳ್ಳುತ್ತಿದ್ದಾರೆ.

ಇವರಿಬ್ಬರಿಗೂ ಪ್ರಜ್ಞೆ ಬಂದಿದ್ದು, ಇವರಲ್ಲಿ ಸಂಜೀವ ಶೆಟ್ಟಿ ಅಸ್ವಸ್ಥರಾಗಿ ಇನ್ನೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇಂದು ಆಸ್ಪತ್ರೆಗೆ ಆಗಮಿಸಿರುವ ರೈಲ್ವೆ ಹಾಗೂ ಮಣಿಪಾಲ ಪೊಲೀಸರು ರತ್ನ ಶೆಟ್ಟಿ ಹಾಗೂ ಕುಟುಂಬದವರಿಂದ ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಈ ಕುರಿತು ಮಣಿಪಾಲ ಪೊಲೀಸರು ಮುಂಬೈಯ ಪನ್ವೆಲ್ ಠಾಣೆಗೆ ಮಾಹಿತಿ ನೀಡಲಿದ್ದು, ಅದರಂತೆ ಪನ್ವೆಲ್‌ನಲ್ಲಿ ಪ್ರಕರಣ ದಾಖಲಾಗಿ ಮುಂದಿನ ತನಿಖೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News