×
Ad

ದೇಶಾದ್ಯಂತದ ಪಠ್ಯ ಪುಸ್ತಕಗಳಲ್ಲಿ ಮೊಗಲರ ಚರಿತ್ರೆ ನಾಪತ್ತೆಯಾಗಲಿದೆ !

Update: 2017-08-07 22:17 IST

ಹೊಸದಿಲ್ಲಿ, ಆ. 8: ದೇಶದಾದ್ಯಂತದ ಪಠ್ಯಪುಸ್ತಕದಲ್ಲಿ ಚರಿತ್ರೆಯನ್ನೇ ಬದಲಾಯಿಸುವ ಹಾಗೂ ಮರು ಬರೆಯುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದ್ದು, ಇದರಿಂದ ಭಾರತಕ್ಕೆ ವಾಸ್ತುಶಿಲ್ಪ, ಸಾಹಿತ್ಯ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಿದ ಮೊಗಲರಿಗೆ ಸಂಬಂಧಿಸಿದ ಪಠ್ಯಗಳು ಮಾಯವಾಗಲಿವೆ.

ಇದಕ್ಕೆ ಸಂಬಂಧಿಸಿ ಆರ್‌ಎಸ್‌ಎಸ್ ಬೆಂಬಲಿತ ಶಿಕ್ಷಣ, ಸಂಸ್ಕೃತಿ ಉತ್ಥಾನ ನ್ಯಾಸ್ ಜುಲೈಯಲ್ಲಿ ಎನ್‌ಸಿಇಆರ್‌ಟಿಗೆ ಶಿಫಾರಸು ಪತ್ರ ಕಳುಹಿಸಿದೆ.

ಈ ಹಿಂದೆ ರಾಜಸ್ತಾನ ಸರಕಾರ ಪಠ್ಯಪುಸ್ತಕದ ಚರಿತ್ರೆಯನ್ನು ಪರಿಷ್ಕರಿಸಿದೆ. ಈಗ ಮಹಾರಾಷ್ಟ್ರ ಸರಕಾರದ ಈ ದಿಶೆಯಲ್ಲಿ ಹೆಜ್ಜೆ ಇರಿಸಿದೆ

ಮಹಾರಾಷ್ಟ್ರ ರಾಜ್ಯ ಶಿಕ್ಷಣ ಮಂಡಳಿ ಮುಂದಿನ ವರ್ಷದಿಂದ ಜಾರಿಗೆ ತರಲಿರುವ 7ನೇ ತರಗತಿಯ ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಛತ್ರಪತಿ ಶಿವಾಜಿ ಸ್ಥಾಪಿಸಿದ ಮರಾಠ ಸಾಮ್ರಾಜ್ಯದ ಬಗೆಗಿನ ವಿವರಗಳು ಹೆಚ್ಚು ಆವರಿಸಿಕೊಳ್ಳಲಿವೆ. ವಾಸ್ತುಶಿಲ್ಪ ಹಾಗೂ ಸಾಹಿತ್ಯಕ್ಕೆ ಪ್ರಮುಖ ಕೊಡುಗೆ ನೀಡಿದ ಮೊಗಲರ ವಿವರಗಳು ನಾಪತ್ತೆಯಾಗಲಿವೆ.

7ನೇ ತರಗತಿಯ ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ರಝಿಯಾ ಸುಲ್ತಾನ್, ಮುಹಮ್ಮದ್ ಬಿನ್ ತುಘ್ಲಕ್ ಸೇರಿದಂತೆ ಮೊಗಲರು ಹಾಗೂ ಮುಸ್ಲಿಂ ಆಡಳಿತಗಾರರ ಪಠ್ಯ ಭಾಗಗಳು ಮಾಯವಾಗಲಿವೆ. ಅಲ್ಲದೆ ಅವರು ನಿರ್ಮಿಸಿದ ಸ್ಮಾರಕಗಳ ಬಗ್ಗೆ ಪಠ್ಯ ಪುಸ್ತಕದಲ್ಲಿ ಉಲ್ಲೇಖ ಇರಲಾರದು. ಆದುದರಿಂದ ಇನ್ನು ಮುಂದೆ ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್ ನಿರ್ಮಿಸಿದ ರಾಜ ಯಾರು?, ಕೆಂಪು ಕೋಟೆಯಲ್ಲಿರುವ ಕುತುಬ್ ಮಿನಾರ್‌ನ ಚರಿತ್ರೆ ಏನೆಂದು ವಿದ್ಯಾರ್ಥಿಗಳಿಗೆ ತಿಳಿದಿರಲಾರದು.

ಪಠ್ಯ ಪುಸ್ತಕದ ಮಧ್ಯಕಾಲೀನ ಚರಿತ್ರೆಯಲ್ಲಿ ಶಿವಾಜಿಗೆ ಪ್ರಾಮುಖ್ಯತೆ ನೀಡಲಾಗಿದೆ. ಆತ, ಆತನ ಕುಟುಂಬದ ಬಗ್ಗೆ ವಿವರ ನೀಡಲಾಗಿದೆ. ಇನ್ನೊಂದೆಡೆ ದಿಲ್ಲಿಯ ಆಡಳಿತ ನಡೆಸಿದ ಮೊದಲ ಮಹಿಳೆ ರಝಿಯಾ ಸುಲ್ತಾನಾ, ರಾಜಧಾನಿಯನ್ನು ಸ್ಥಳಾಂತರಿಸಿದ ಹಾಗೂ ಚರ್ಮದ ನಾಣ್ಯಗಳನ್ನು ಚಲಾವಣೆಗೆ ತಂದ ಮುಹಮ್ಮದ್ ಬಿನ್ ತುಘ್ಲಕ್‌ನ ಚರಿತ್ರೆಯನ್ನು ದೂರ ಇಡಲಾಗಿದೆ.

ಮೊಗಲ ಚರಿತ್ರೆಯನ್ನು ಪಠ್ಯ ಪುಸ್ತಕದಿಂದ ದೂರವಿರಿಸಿರುವುದು ಇದು ಮೊದಲ ಬಾರಿ ಏನಲ್ಲ. ಈ ಹಿಂದೆ ರಾಜಸ್ಥಾನ ಸರಕಾರ ಕೂಡ ಈ ಹಿಂದೆ ಪಠ್ಯ ಪುಸ್ತಕದಲ್ಲಿ ಇದೇ ರೀತಿ ಬದಲಾವಣೆ ಮಾಡಿತ್ತು. ಹಲ್ದಿಘಾಟಿ ಯುದ್ಧದಲ್ಲಿ ವಿಜಯಿಯಾಗಿರುವುದು ಅಕ್ಬರ್ ಅಲ್ಲ. ಮಹಾರಾಣ ಪ್ರತಾಪ್ ಎಂದು ಅಲ್ಲಿ ಹೇಳಲಾಗಿತ್ತು. ಅಲ್ಲದೆ ಅಕ್ಬರ್ ಹೆಸರಿನ ಮುಂದೆ ಇದ್ದ ಗ್ರೇಟ್ ಪದವನ್ನು ತೆಗೆದಿತ್ತು.

ಪಠ್ಯ ಪುಸ್ತಕದಲ್ಲಿ ಮೊಗಲರ ಚರಿತ್ರೆ ಅಳಿಸಿ ಹಾಕಿರುವ ರಾಜ್ಯ ಶಿಕ್ಷಣ ಮಂಡಳಿ ಹಾಗೂ ಸಂಸ್ಥೆಗಳು ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಕೂಡ ಬದಲಾಯಿಸಲು ಪ್ರಯತ್ನಿಸುತ್ತಿವೆ. ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಸಿಬಿಎಸ್‌ಇ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿದೆ. ಈ ಪುಸ್ತಕಗಳನ್ನು ನಾಗರಿಕ ಸೇವೆ ಪರೀಕ್ಷೆ ಬರೆಯುವವರು ಕೂಡ ಓದುತ್ತಾರೆ. ಆದರೆ, ದೀನನಾಥ್ ಬಾತ್ರ ನೇತೃತ್ವದ ಶಿಕ್ಷಣ ಸಂಸ್ಕೃತಿ ಉತ್ಥಾನ ನ್ಯಾಸ್ ಜುಲೈಯಲ್ಲಿ ಎನ್‌ಸಿಇಆರ್‌ಟಿಗೆ ಶಿಫಾರಸು ಕಳುಹಿಸಿದ್ದು, ಈ ರೀತಿಯ ಅಂಶಗಳನ್ನು ಪಠ್ಯ ಪುಸ್ತಕದಿಂದ ಕೈಬಿಡುವಂತೆ ಹೇಳಿರುವುದುಗಾ ವೈರ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News