×
Ad

ಮಂಗಳೂರಿನ ಕಲಾವಿದೆ ರೆಮೋನಾ ಇವೆಟ್ ಪಿರೇರಾಗೆ ಪ್ರಶಸ್ತಿ

Update: 2017-08-07 23:13 IST

ಹೆಬ್ರಿ, ಆ. 7: ನವದೆಹಲಿಯ ಕರ್ನಾಟಕ ಸಂಘದ ಸಭಾಂಗಣದಲ್ಲಿ ಕಲಾ ಸಂಕುಲ ಸಂಸ್ಥೆಯ ವತಿಯಿಂದ ದೆಹಲಿಯಲ್ಲಿ 'ವಿಶ್ವಕರ್ಮ ಭವನ' ನಿರ್ಮಾಣ, ಕೇಂದ್ರ ಸರ್ಕಾರದಿಂದ ವಿಶ್ವಕರ್ಮ ಜಯಂತಿ ಘೋಷಣೆ, ಮತ್ತು ದೇಶದ ಇತರ ರಾಜ್ಯದಲ್ಲೂ ವಿಶ್ವಕರ್ಮ ಜಯಂತಿ ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಬೇಕು ಎನ್ನುವ ಉದ್ದೇಶದಿಂದ ನಡೆಸಲಾಗುವ ಅಖಿಲ ಭಾರತ 2ನೇ ವಿಶ್ವಕರ್ಮ ಸಂಸ್ಕೃತಿ ಸಮ್ಮೇಳನ ಆ.11ರಂದು ನಡೆಯಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಮಾರುತಿ ಬಡಿಗೇರ್ ಸೋಮವಾರ ಹೆಬ್ರಿಯಲ್ಲಿ ಪ್ರಕಟಣೆಯಲ್ಲಿ ತಿಳಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಬೆಂಗಳೂರಿನ ಕೆ.ಎಸ್. ಪ್ರಭಾಕರ್ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ವಿಶ್ವಕರ್ಮ ಸಮುದಾಯದವರಾದ ಕೇಂದ್ರ ಸರ್ಕಾರದ ಜವಳಿ ಸಚಿವ ಅಜಯ್ ಟಮಟ್ ಉದ್ಘಾಟಿಸುವರು.

ರಾಯಚೂರು ಸಂಸದ ಬಿ.ವಿ.ನಾಯಕ, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ನಂದ ಕುಮಾರ್, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಾಬು ಪತ್ತಾರ್, ನವದೆಹಲಿ ಜನಕಪುರಿ ಕನ್ನಡ ಕೂಟದ ಅಧ್ಯಕ್ಷ ಎನ್.ಆರ್. ಶ್ರೀನಾಥ್, ಕಲಬುರ್ಗಿ ವಿಶ್ವಕರ್ಮ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ವೀರೇಂದ್ರ ಇನಾಂದಾರ್ ಮುಖ್ಯ ಅಥಿತಿಗಳಾಗಿ ಭಾಗವಹಿಸುವರು.

ಸಮ್ಮೇಳನದಲ್ಲಿ ಮಂಗಳೂರಿನ ನೃತ್ಯ ಕಲಾವಿದೆ ಕುಮಾರಿ ರೆಮೋನಾ ಇವೆಟ್ ಪಿರೇರಾ ಅವರಿಂದ ನೃತ್ಯ ವೈಭವ, ಕಲಾವಿದರಾದ ಉಡುಪಿಯ ಸುರೇಶ್ ಆಚಾರ್ಯ ಮತ್ತು ರಾಯಚೂರಿನ ಸೌಭಾಗ್ಯ ಅವರಿಂದ ಗೀತಗಾಯನ ನಡೆಯಲಿದೆ. ವಿವಿಧ ಕ್ಷೇತ್ರಗಳ ಗಣ್ಯ ಸಾಧಕರಾದ ದಿನೇಶ್ ಕುಮಾರ್ ವತ್ಸ ವಿಶ್ವಕರ್ಮ ನವದೆಹಲಿ, ಅಜಯ್ ಕುಮಾರ್ ಶೋಬಾನೆ ಭೂಪಾಲ್, ಆರ್ಬೇಟ್ಟು ಜ್ಞಾನದೇವಾ ಕಾಮತ್, ಹೇಮ ರೆಡ್ಡಿ ಎನ್, ಆರ್. ಸೌಭಾಗ್ಯ, ಸೋಮಶೇಖರ್, ಜಿ.ಮಹೇಶ್, ಫಾತೀಮಾ ಹುಸೇನ್, ಕೃಷ್ಣ ಕುಮಾರ್ ಎಸ್. ಯಾಧವ್, ವಿಜಯ ಕುಮಾರ್ ಹಂಚಿನಾಳ್, ಮೋನಪ್ಪ ಇನಾಂದಾರ್, ಕಾಳಪ್ಪ ಇನಾಂದಾರ್, ಎಂ.ಜಿ.ಪತ್ತಾರ್ ಇವರಿಗೆ ಪ್ರಶಸ್ತಿ ಪ್ರದಾನ ಮತ್ತು ಮಂಗಳೂರಿನ ನೃತ್ಯ ಕಲಾವಿದೆ ರೆಮೋನಾ ಇವೆಟ್ ಪಿರೇರಾಗೆ "ಭಾರತ ಗೌರವ"ಪ್ರಶಸ್ತಿ ನೀಡಲಾಗುತ್ತದೆ ಎಂದು ಮಾರುತಿ ಬಡಿಗೇರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News