4x100 ಮೀಟರ್ ರಿಲೇಯಲ್ಲಿ ಸ್ಪರ್ಧಿಸಲು ಬೋಲ್ಟ್ ತಯಾರಿ

Update: 2017-08-08 18:32 GMT

ಲಂಡನ್, ಆ.8: ವಿಶ್ವ ಚಾಂಪಿಯನ್‌ಶಿಪ್‌ನ 4x100 ಮೀಟರ್ ರಿಲೇಯ ಹೀಟ್ಸ್‌ನಲ್ಲಿ ಜಮೈಕಾದ ಓಟದ ರಾಜ ಉಸೇನ್ ಬೋಲ್ಟ್ ಸ್ಪರ್ಧಿಸಲಿದ್ದಾರೆ.

  ಬೋಲ್ಟ್ ಸಾಮಾನ್ಯವಾಗಿ 200 ಮೀಟರ್ ವೈಯಕ್ತಿಕ ವಿಭಾಗದಲ್ಲಿ ಓಡುವವರು. ಆದರೆ ಬಾರಿ ಈ ಸ್ಪರ್ಧೆಯಿಂದ ದೂರ ಸರಿದಿದ್ದಾರೆ. ನಿವೃತ್ತಿಯ ಮೊದಲು ಕೊನೆಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿರುವ 30ರ ಹರೆಯದ ಬೋಲ್ಟ್ ಇದೀಗ ರಿಲೇಯಲ್ಲಿ ಜಮೈಕಾ ತಂಡದ ಪರ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬೋಲ್ಟ್ ವಿಶ್ವ ಚಾಂಪಿಯನ್‌ಶಿಪ್‌ನ 100 ಮೀಟರ್ ಓಟದಲ್ಲಿ ಈ ಬಾರಿ ಕಂಚು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News