ಹ್ಯಾಮರ್ ಎಸೆತ: ಪೊಲೆಂಡ್‌ನ ವ್ಲೊಡಾರ್‌ರ್ಝಿಕ್‌ಗೆ ಚಿನ್ನ

Update: 2017-08-08 19:36 GMT

ಲಂಡನ್, ಆ.8: ಪೊಲೆಂಡ್‌ನ ಆ್ಯನಿಟಾ ವ್ಲೊಡಾರ್ಝಿಕ್ ಬೆರಳು ಮುರಿತದ ನೋವಿನಲ್ಲೂ ಉತ್ತಮ ಪ್ರದರ್ಶನ ನೀಡಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಹ್ಯಾಮರ್ ಎಸೆತದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

31ರ ಹರೆಯದ ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ವ್ಲೊಡಾರ್ಝಿಕ್ 2014ರಿಂದ ಯಾವುದೇ ಸ್ಪರ್ಧೆಯಲ್ಲಿ ಸೋತಿಲ್ಲ. ಸೋಮವಾರ ಒಲಿಂಪಿಕ್ಸ್ ಸ್ಟೇಡಿಯಂನಲ್ಲಿ ನಡೆದ ಸ್ಪರ್ಧೆಯಲ್ಲಿ ನಾಲ್ಕನೆ ಪ್ರಯತ್ನದಲ್ಲಿ 77.39 ಮೀ. ದೂರ ಹ್ಯಾಮರ್ ಎಸೆದಿದ್ದ ವ್ಲೊಡಾರ್ಝಿಕ್ 77.90 ಮೀ. ದೂರ ಹ್ಯಾಮರ್ ಎಸೆಯುವ ಮೂಲಕ ಚಿನ್ನ ಜಯಿಸಿದರು. ಅಭ್ಯಾಸದ ವೇಳೆ ನನ್ನ ಬೆರಳು ಮುರಿದಿತ್ತು ಎಂದು ಸ್ಪರ್ಧೆಯ ಬಳಿಕ ವ್ಲೊಡಾರ್ಝಿಕ್ ಬಹಿರಂಗಪಡಿಸಿದರು. ಚೀನಾದ ಝೆಂಗ್ ವಾಂಗ್(75.98 ಮೀ.) ಬೆಳ್ಳಿ ಪದಕ, ಪೊಲೆಂಡ್‌ನ ಇನ್ನೋರ್ವ ಸ್ಪರ್ಧಿ ಮಾಲ್ವಿನಾ ಕಾಪ್ರೊನ್(74.76 ಮೀ.) ಕಂಚಿನ ಪದಕ ಜಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News