ಮಹಿಳೆಯರ 1,500 ಮೀ. ಓಟ: ಕಿಪಿಗನ್ ಚಾಂಪಿಯನ್

Update: 2017-08-08 19:39 GMT

ಲಂಡನ್, ಆ.8: ಒಲಿಂಪಿಕ್ಸ್ ಚಾಂಪಿಯನ್ ಕೀನ್ಯದ ಫೈತ್ ಕಿಪಿಗನ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ 1,500 ಮೀ. ಓಟದಲ್ಲಿ ಚಾಂಪಿಯನ್ ಆಗಿದ್ದಾರೆ. ಈ ಮೂಲಕ ತನ್ನ ಮುಡಿಗೆ ಮತ್ತೊಂದು ವಿಶ್ವ ಕಿರೀಟವನ್ನು ಸೇರ್ಪಡೆಗೊಳಿಸಿದ್ದಾರೆ.

ಸೋಮವಾರ ನಡೆದ ಫೈನಲ್‌ನಲ್ಲಿ ಕಿಪಿಗನ್ 4 ನಿಮಿಷ 2.59 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರೆ, ಅಮೆರಿಕದ ಜೆನ್ನಿಫೆರ್ ಸಿಂಪ್ಸನ್(4:02.76 ಸೆ.) ಬೆಳ್ಳಿ ಹಾಗೂ ದಕ್ಷಿಣ ಆಫ್ರಿಕದ 800 ಮೀ. ಸ್ಪೆಷಲಿಸ್ಟ್ ಕಾಸ್ಟರ್ ಸೆಮೆನ್ಯಾ(4:02.90 ಸೆ.) ಕಂಚು ಜಯಿಸಿದ್ದಾರೆ.ಹಾಲಿ ವಿಶ್ವ ಚಾಂಪಿಯನ್ ಡಿಬಾಬಾ 12ನೆ ಸ್ಥಾನ ಪಡೆದಿದ್ದಾರೆ.

‘‘ಇಂತಹ ಉತ್ತಮ ಫೀಲ್ಡ್ ನಲ್ಲಿ ವೇಗವಾಗಿ ಓಡಬಲ್ಲೆನೆಂಬ ವಿಶ್ವಾಸವಿತ್ತು. ಇಲ್ಲಿ ಚಿನ್ನ ಜಯಿಸಿರುವುದಕ್ಕೆ ಸಂತೋಷವಾಗುತ್ತಿದೆ. ನನ್ನ ಕುಟುಂಬ ಸದಸ್ಯರೊಂದಿಗೆ ಗೆಲುವಿನ ಸಂಭ್ರಮ ಆಚರಿಸಿಕೊಳ್ಳಲು ಬಯಸುವೆ’’ ಎಂದು ಕಿಪಿಗನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News