×
Ad

ಜಂತುಹುಳ ನಿವಾರಣಾ ದಿನ: ಜಿಲ್ಲೆಯಲ್ಲಿ 4,69,008 ಮಕ್ಕಳಿಗೆ ಮಾತ್ರೆ ನೀಡುವ ಗುರಿ

Update: 2017-08-09 17:53 IST

ಮಂಗಳೂರು, ಆ. 9: ಮಕ್ಕಳಲ್ಲಿ ಜಂತುಹುಳ ನಿವಾರಣೆಗಾಗಿ ಆ.10ರಂದು ಜಂತುಹುಳ ನಿವಾರಣಾ ದಿನ ಆಚರಿಸಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಅಂಗನವಾಡಿ ಹಾಗೂ ಶಾಲೆಗಳು ಸೇರಿದಂತೆ ಒಟ್ಟು 4,69,008 ಮಕ್ಕಳಿಗೆ ಜಂತುಹುಳ ಮಾತ್ರೆ ತಿನ್ನಿಸುವ ಗುರಿಯನ್ನು ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ ರಾವ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, 1ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಅಂಗನವಾಡಿ ಮತ್ತು ಶಾಲೆಗಳಲ್ಲಿ ಜಂತುಹುಳ ಮಾತ್ರೆ ನೀಡಲಾಗುವುದು ಎಂದರು.

ಎಲ್ಲ ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆ, ಅಂಗನವಾಡಿಗಳಲ್ಲಿ ಜಂತುಹುಳ ನಿವಾರಣಾ ಮಾತ್ರೆ ಉಚಿತವಾಗಿ ನೀಡಲಾಗುವುದು. ಖಾಸಗಿ ಶಾಲೆಗಳು ಅಪೇಕ್ಷೆ ಪಟ್ಟರೆ ಅಲ್ಲಿನ ಮಕ್ಕಳಿಗೆ ಮಾತ್ರೆ ಪೂರೈಸಲಾಗುವುದು. ಮಧ್ಯಾಹ್ನ ಊಟದ ಬಳಿಕ ಶಾಲೆಗಳಲ್ಲಿ ಶಿಕ್ಷಕರ ಮತ್ತು ಅಂಗನವಾಡಿಯಲ್ಲಿ ಕಾರ್ಯಕರ್ತೆಯರ ಉಪಸ್ಥಿತಿಯಲ್ಲಿ ಮಕ್ಕಳಿಗೆ ಮಾತ್ರೆ ನೀಡಲಾಗುವುದು. ಮಕ್ಕಳು ಮಾತ್ರೆಯನ್ನು ಚೀಪಿ ತಿನ್ನಬೇಕು. 1ರಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ, 2ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆ ನೀಡಲಾಗುವುು ಎಂದು ಅವರು ವಿವರ ನೀಡಿದರು.

ಆ.10ರಂದು ಜಂತುಹುಳ ಮಾತ್ರೆ ಪಡೆಯದೇ ಬಾಕಿ ಇರುವ ಮಕ್ಕಳಿಗೆ, ಅಂಗನವಾಡಿಯಲ್ಲಿ ದಾಖಲಾಗದವರಿಗೆ, ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆ.17ರಂದು ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಕಿರಿಯ ಆರೋಗ್ಯ ಸಹಾಯಕಿಯರು ಕಡ್ಡಾಯವಾಗಿ ಜಂತುಹುಳ ಮಾತ್ರೆ ನೀಡುತ್ತಾರೆ. ಜಂತುಹುಳ ಮಾತ್ರೆ ಚೀಪಿ ನುಂಗುವುದರಿಂದ ಯಾವುದೇ ಅಡ್ಡಪರಿಣಾಮವಿಲ್ಲ. ಹುಳ ಹೊಟ್ಟೆಯಿಂದ ಹೊರಹೋದರೂ ಯವುದೇ ತೊಂದರೆ ಇಲ್ಲ. ಇದರಿಂದ ರಕ್ತಹೀನತೆ, ಅಪೌಷ್ಠಿಕತೆ ತಡೆಗಟ್ಟಬಹುದು. ಹುಳಬಾಧೆ ಇದ್ದರೆ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಮಕ್ಕಳು ಜಂತುಹುಳ ಮಾತ್ರೆ ಸೇವಿಸಬೇಕು ಎಂದು ತಿಳಿಸಿದರು.

ಜಂತುಹುಳ ಬಾಧೆಯಿಂದ ಮಕ್ಕಳು ಹೆಚ್ಚಾಗಿ ರೋಗಗ್ರಸ್ತರಾಗಿ ಶಾಲೆಗೆ ಗೈರಾಗುತ್ತಾರೆ. ತರಗತಿಯಲ್ಲಿ ಏಕಾಗ್ರೆತೆ ಹೊಂದಲು ವಿಲರಾಗುತ್ತಾರೆ. ಮಕ್ಕಳ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆ ಕುಂಠಿತವಾಗಿ ಭವಿಷ್ಯದಲ್ಲಿ ಅವರ ಕೆಲಸ ಮಾಡುವ ಸಾಮರ್ಥರ್ಯ ಕಡಿಮೆಯಾಗಬಹುದು. ನೈರ್ಮಲ್ಯ, ವೈಯಕ್ತಿಕ ಶುಚಿತ್ವ ಕೊರತೆ, ಜಂತುಹುಳ ಸೋಂಕಿನ ಮಣ್ಣು ಸ್ಪರ್ಶದಿಂದ ಜಂತುಹುಳ ಬಾಧೆ ಬರುತ್ತದೆ. ಇದರಿಂದ ಹೊಟ್ಟೆನೋವು, ಬೇ, ಹಸಿವಿಲ್ಲದಿರುವಿಕೆ, ಸುಸ್ತು ಮುಂತಾದ ಲಕ್ಷಣ ಕಂಡುಬರುತ್ತದೆ ಎಂದು ವಿವರಿಸಿದರು.

ಜಂತುಹುಳ ಬಾಧೆಯಿಂದ ರಕ್ಷಿಸಲು ಮಕ್ಕಳ ಉಗುರು ಚಿಕ್ಕದಾಗಿ ಕತ್ತರಿಸಿ ಶುಚಿಯಾಗಿಟ್ಟುಕೊಳ್ಳಬೇಕು, ಊಟ, ತಿಂಡಿಗೆ ಮೊದಲು, ಶೌಚಾಲಯ ಬಳಸಿದ ಬಳಿಕ ಕೈಗಳನ್ನು ಸಾಬೂನಿನಿಂದ ತೊಳೆಯಬೇಕು, ಆಹಾರ ಪದಾರ್ಥಗಳನ್ನು ಮುಚ್ಚಿಡಬೇಕು, ಶುದ್ದೀಕರಿಸಿದ ನೀರು ಕುಡಿಯಬೇಕು, ಹಣ್ಣುಘಿ, ತರಕಾರಿ ಉಪಯೋಗಿಸುವ ಮುನ್ನ ಶುದ್ಧ ನೀರಿನಿಂದ ತೊಳೆಯಬೇಕು, ಪರಿಸರ ಸ್ವಚ್ಛವಾಗಿಡಬೇಕು, ಮಲವಿಸರ್ಜನೆಗೆ ಶೌಚಾಲಯವನ್ನೇ ಬಳಸಬೇಕು, ನಡೆಯುವಾಗ ಪಾದರಕ್ಷೆಗಳನ್ನು ಬಳಸಬೇಕು ಎಂದು ಮಾಹಿತಿ ನೀಡಿದರು.

ನೋಡೆಲ್ ಅಧಿಕಾರಿ ಡಾ. ಮಹಮ್ಮದ್ ಶರೀಫ್, ಆರ್‌ಸಿಎಚ್ ಅಧಿಕಾರಿ ಡಾ. ಅಶೋಕ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News