ಕಿನ್ನಿಮೂಲ್ಕಿ- ಕನ್ನರ್ಪಾಡಿ ಬ್ರಾಹ್ಮಣ ಸಂಘದ ಪದಾಧಿಕಾರಿಗಳ ಆಯ್ಕೆ
Update: 2017-08-09 21:31 IST
ಉಡುಪಿ, ಆ.9: ಕಿನ್ನಿಮೂಲ್ಕಿ- ಕನ್ನರ್ಪಾಡಿ ಬ್ರಾಹ್ಮಣ ಸಂಘದ ನೂತನ ಅಧ್ಯಕ್ಷರಾಗಿ ಕೆ.ರಘುಪತಿ ರಾವ್ ಹಾಗೂ ಕಾರ್ಯದರ್ಶಿಯಾಗಿ ಜನಾರ್ದನ ಭಟ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು. ಗೌರವಾಧ್ಯಕ್ಷರಾಗಿ ಕೆ.ಲಕ್ಷ್ಮೀನಾರಾಯಣ ಭಟ್, ಉಪಾಧ್ಯಕ್ಷರುಗಳಾಗಿ ವೆಂಕಟ್ರಾಜ ಭಟ್, ನಾಗೇಶ ಭಟ್, ಕೆ.ಎಲ್.ರಾವ್, ಎಂ.ಸತೀಶ ರಾವ್, ಶ್ರೀಪತಿ ಉಪಾಧ್ಯಾಯ, ಕೆ.ಎಸ್.ಮಂಜ, ರಾಮಕೃಷ್ಣ ಭಟ್, ಜೊತೆ ಕಾರ್ಯ ದರ್ಶಿಯಾಗಿ ಸುದರ್ಶನ ಆಚಾರ್ಯ, ಕೋಶಾಧಿಕಾರಿಯಾಗಿ ಮುರಳೀಕೃಷ್ಣ ಭಟ್ ಕೆ.ಆರ್., ಕಾನೂನು ಸಲಹೆಗಾರರಾಗಿ ಜಯಪ್ರಕಾಶ ಕೆದ್ಲಾಯ, ಮಹಿಳಾ ವಿಭಾಗ ಉಪಾಧ್ಯಕ್ಷೆ ಉಷಾ ಚಡಗ, ಸಂಘಟನಾ ಕಾರ್ಯದರ್ಶಿ ಸಂಧ್ಯಾ ರಮೇಶ್ ಹಾಗೂ ಇತರ 27 ಮಂದಿಯನ್ನೊಳಗೊಂಡ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.