ಡಿವೈಡರ್‌ಗೆ ಕಾರು ಢಿಕ್ಕಿ: ಮೂವರಿಗೆ ಗಾಯ
Update: 2017-08-09 21:42 IST
ಮಂಗಳೂರು, ಆ. 9: ಕಾರೊಂದು ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬುಧವಾರ ಅಡ್ಯಾರ್ ಬಳಿ ನಡೆದಿದೆ.
ಗಾಯಾಳುಗಳನ್ನು ದೇರೆಬೈಲ್‌ನ ನಿವಾಸಿಗಳಾದ ರಾಜಶೇಖರ ಭಟ್ (75), ಗೌರಿ ಭಟ್ (70) ಮತ್ತು ಸೋಮಶೇಖರ ಭಟ್ (53) ಎಂದು ಗುರುತಿಸಲಾಗಿದೆ.
ಕಾರಿನಲ್ಲಿದ್ದ ಪ್ರಯಾಣಿಕರು ಬಿ.ಸಿ.ರೋಡ್‌ನಿಂದ ಮಂಗಳೂರಿಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ಬಳಿಕ ಟ್ಯಾಂಕರ್‌ಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.