ಕೊಳಕೆ: ಎಸ್‌ಬಿಎಸ್ ವಾರ್ಷಿಕ ಮಹಾ ಸಭೆ
Update: 2017-08-09 22:14 IST
ಬಂಟ್ವಾಳ, ಆ. 9: ಹಿದಾಯತುಲ್ ಇಸ್ಲಾಮ್ ಹೈಯರ್ ಸೆಕೆಂಡರಿ ಕೇಂದ್ರ ಮದರಸ ಕೊಳಕೆ ಇದರ 2017-18ನೆ ಸಾಲಿನ ಎಸ್‌ಬಿಎಸ್ ವಾರ್ಷಿಕ ಮಹಾ ಸಭೆಯು ಸದರ್ ಮುಅಲ್ಲಿಮ್ ಟಿ.ಕೆ.ಅಬ್ದುಲ್ ರಝಾಕ್ ಸಖಾಫಿ ತೆಕ್ಕಾರು ಅಧ್ಯಕ್ಷತೆಯಲ್ಲಿ ಮದರಸ ಹಾಲಿನಲ್ಲಿ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಅರ್ಶದ್, ಉಪಾಧ್ಯಕ್ಷರಾಗಿ ನಿಝಾಮುದ್ದೀನ್ ಹಾಶಿರ್, ಪ್ರಧಾನ ಕಾರ್ಯದರ್ಶಿಯಾಗಿ ಝಿಯಾದ್, ಜೊತೆ ಕಾರ್ಯದರ್ಶಿಯಾಗಿ ಹಾಫಿಳ್, ಸುಹೈಲ್, ಕೋಶಾಧಿಕಾರಿಯಾಗಿ ತೌಸೀಫ್ ಹಾಗೂ 13 ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮುದಬ್ಬಿರಾಗಿ ಟಿ.ಕೆ.ಅಬ್ದುಲ್ ರಝಾಕ್ ಸಖಾಫಿ ತೆಕ್ಕಾರು, ನಿರ್ದೇಶಕರಾಗಿ ಬದ್ರುದ್ದೀನ್ ಅಹ್ಸನಿ ಅಳಕೆ, ಮುಹಮ್ಮದ್ ರಫೀಕ್ ಮದನಿ ಬಾಳೆಪುಣಿ, ಹಂಝಾ ಫಾಳಿಲಿ ಅಲ್ ಅಫ್ಲಲಿ ಬಾಳೆಪುಣಿ, ಎನ್.ಹೈದರ್ ಮದನಿ ಕೆಮ್ಮಾರ ಆಯ್ಕೆಮಾಡಲಾಗಿದೆ.