×
Ad

ಆರ್ಟಿಸ್ಟ್ ಫೋರಂನಿಂದ ಬೆಳ್ಳಿಹಬ್ಬದ ಚಿತ್ರಕಲಾ ಪ್ರದರ್ಶನ

Update: 2017-08-09 22:22 IST

ಉಡುಪಿ, ಆ.9: ಸ್ಥಾಪನೆಯ ರಜತ ಮಹೋತ್ಸವದ ಸಂಭ್ರಮದಲ್ಲಿರುವ ಉಡುಪಿಯ ಆರ್ಟಿಸ್ಟ್ ಫೋರಂ, ಬೆಳ್ಳಿಹಬ್ಬದಾಚರಣೆಯ ಅಂಗವಾಗಿ ಸದಸ್ಯ ಕಲಾವಿದರ ಸಮೂಹ ಕಲಾಪ್ರದರ್ಶನವೊಂದನ್ನು ಅ.12ರಿಂದ 15ರವರೆಗೆ ಗ್ಯಾಲರಿ ದೃಷ್ಠಿಯಲ್ಲಿ ಹಮ್ಮಿಕೊಂಡಿದೆ ಎಂದು ಆರ್ಟಿಸ್ಟ್ ಫೋರಂನ ಅಧ್ಯಕ್ಷ ಹಿರಿಯ ಕಲಾವಿದ ಯು.ರಮೇಶ್ ರಾವ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 1972ರ ಮೇ ತಿಂಗಳಲ್ಲಿ ಸ್ಥಾಪನೆಗೊಂಡ ಆರ್ಟಿಸ್ಟ್ ಫೋರಂ ತನ್ನ 25 ವರ್ಷಗಳ ಅಸ್ತಿತ್ವದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಮಾಜದಲ್ಲಿ ಕಲಾ ವಾತಾವರಣ ನಿರ್ಮಿಸಲು ಶ್ರಮಿಸಿ ಯಶಸ್ಸುಕಂಡಿದೆ ಎಂದರು.

ಜಿಲ್ಲೆಯ ಏಕೈಕ ಕಲಾಸಂಸ್ಥೆಯಾದ ಆರ್ಟಿಸ್ಟ್ ಫೋರಂ, ಉಡುಪಿಯಲ್ಲಿ ಮಾತ್ರವಲ್ಲದೇ ಜ್ಜಾದ್ಯಂತ ಅನೇಕ ಕಲಾ ಚಟುವಟಿಕೆಗಳನ್ನು ನಡೆಸಿ ಕಲಾಸಕ್ತರ ಗಮನ ಸೆಳೆದಿದೆ. ರಾಷ್ಟ್ರ ಮಟ್ಟದ, ರಾಜ್ಯಮಟ್ಟದ ಕಲಾ ಶಿಬಿರಗಳು, ಕಲಾ ಪ್ರದರ್ಶನಗಳು, ಕಲಾಸ್ಪರ್ಧೆಗಳು, ಹೆಸರಾಂತ ಕಲಾವಿದರ ಕಲಾಪ್ರಾತ್ಯಕ್ಷಿಕೆಗಳ ನ್ನು ಹಮ್ಮಿಕೊಂಡಿದೆ. ಮಕ್ಕಳಿಗೆ ಖೈದಿಗಳಿಗೆ ಶಿಬಿರಗಳನ್ನು ಏರ್ಪಡಿಸಿದೆ ಎಂದು ರಮೇಶ್ ರಾವ್ ತಿಳಿಸಿದರು.

ಇದೀಗ ರಜತ ಮಹೋತ್ಸ ವರ್ಷವನ್ನು ಆಚರಿಸಲು ನಿರ್ಧರಿಸಿದ್ದು, ಇದರ ಉದ್ಘಾಟನೆ ಸದಸ್ಯ ಕಲಾವಿದರ ಕಲಾಪ್ರದರ್ಶನದೊಂದಿಗೆ ನಡೆಯಲಿದೆ. ಸಂಸ್ಥೆಯ 50 ಕಲಾವಿದರಲ್ಲಿ 28 ಮಂದಿ ಹಿರಿಯ ಮತ್ತು ಕಿರಿಯ ಕಲಾವಿದರು ವಿವಿಧ ಮಾಧ್ಯಮಗಳಲ್ಲಿ ರಚಿಸಿದ ಸುಮಾರು 40 ಕಲಾಕೃತಿಗಳು ನಾಲ್ಕು ದಿನಗಳ ಪ್ರದರ್ಶನದಲ್ಲಿ ಪ್ರದರ್ಶಿಸಲ್ಪಡಲಿದೆ ಎಂದವರು ತಿಳಿಸಿದರು.

ರಜತ ಮಹೋತ್ಸವ ಹಾಗೂ ಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭ ಆ.12ರ ಶನಿವಾರ ಸಂಜೆ 4:30ಕ್ಕೆ ಅಲಂಕಾರ್ ಥಿಯೇಟರ್ ಹಿಂಭಾಗದಲ್ಲಿ ರುವ ಗ್ಯಾಲರಿ ದೃಷ್ಟಿಯಲ್ಲಿ ನಡೆಯಲಿದೆ. ಮಣಿಪಾಲ ವಿವಿಯ ಪ್ರೊ ವೈಸ್ ಚಾನ್ಸಲರ್ ಹಾಗೂ ಎಂಐಟಿಯ ನಿರ್ದೇಶಕ ಡಾ.ಜಿ.ಕೆ.ಪ್ರಭು ಉದ್ಘಾಟಿಸು ವರು. ಯುಪಿಸಿಎಲ್‌ನ ಇಡಿ ಕಿಶೋರ್ ಆಳ್ವ, ಲೇಖಕಿ, ಉಪನ್ಯಾಸಕಿ ಡಾ.ನಿಕೇತನ, ಮಣಿಪಾಲದ ಡಾ.ಉನ್ನಿಕೃಷ್ಣನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಲಾಪ್ರದರ್ಶನದಲ್ಲಿ ಕಲಾವಿದರಾದ ರಮೇಶ್ ರಾವ್, ಭಾಸ್ಕರ್ ರಾವ್, ಪೆರ್ಮುದೆ ಮೋಹನ್‌ಕುಮಾರ್, ಪುರುಷೋತ್ತಮ ಅಡ್ವೆ, ಎಚ್.ಕೆ. ರಾಮಚಂದ್ರ, ಸಕು ಪಾಂಗಾಳ, ಜಯವಂತ್, ಸಂದನ್ ಜಿ, ಜೀವನ್ ಶೆಟ್ಟಿ, ವೀಣಾ ಶ್ರೀನಿವಾಸ್, ರಾಜೇಂದ್ರ ಕೇದಿಗೆ, ಜನಾರ್ದನ ಹಾವಂಜೆ, ಸಂತೋಷ್ ಪೈ, ಮಂಜುನಾಥ ಮಯ್ಯ, ಶ್ರೀನಾಥ್ ಮಣಿಪಾಲ, ಸಿವಪ್ಪ ಹಾದಿಮನಿ, ಸಿಂಧು ಕಾಮತ್, ನಾಗರಾಜ ಹನೆಹಳ್ಳಿ, ವ್ನಿೇಶ್ ಕಳತ್ತೂರು, ಅರುಣ್ ಅಮೀನ್, ಗಣೇಶ್ ಕೆ, ಖುರ್ಷಿದ್, ಮುಸ್ತಾಫ ಕೆ.ಪಿ., ಶೈಲೇಶ್ ಕೋಟ್ಯಾನ್, ವಸಂತ ದೇವಾಡಿಗ, ಅಶೋಕ್ ಶೇಟ್, ಲಿಯಾಕತ್ ಅಲಿ, ಪವನ್‌ಕುಮಾರ್ ಅತ್ತಾವರ ಇವರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.

ಇದೇ ಕಲಾಪ್ರದರ್ಶನ ನವೆಂಬರ್ ತಿಂಗಳಲ್ಲಿ ಮಂಗಳೂರಿನ ಎಸ್ ಕ್ಯೂಬ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ. ಉಡುಪಿಯ ಕಲಾಪ್ರದರ್ಶನ ಆ.13ರಿಂದ 15ರವರೆಗೆ ಬೆಳಗ್ಗೆ 10ರಿಂದ ಸಂಜೆ 7:00ರವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದು ರಮೇಶ್ ರಾವ್ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಫೋರಂನ ಉಪಾಧ್ಯಕ್ಷ ಪುರುಷೋತ್ತಮ ಅಡ್ವೆ, ಪ್ರಧಾನ ಕಾರ್ಯದರ್ಶಿ ಸಕು ಪಾಂಗಾಳ, ಜೊತೆ ಕಾರ್ಯದರ್ಶಿ ರಾಜೇಂದ್ರ ಕೇದಿಗೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News