ಸಿಎಐಪಿಸಿಸಿ ಪರೀಕ್ಷೆ: ಮಹಮ್ಮದ್ ತಾಬಿಷ್ ಹಸನ್ ತೇರ್ಗಡೆ
Update: 2017-08-09 22:37 IST
ಪುತ್ತೂರು, ಆ. 9: ರಾಷ್ಟ್ರಾದ್ಯಂತ ನಡೆಯುವ ಸಿಎಐಪಿಸಿಸಿ ಇದರ ಮೇ ತಿಂಗಳಿನಲ್ಲಿ ನಡೆದ ಗ್ರೂಪ್-1 ಮತ್ತು ಗ್ರೂಪ್-2 ಹೀಗೆ ಎರಡೂ ಪರೀಕ್ಷೆಯಲ್ಲಿ ಉಪ್ಪಿನಂಗಡಿಯ ಮಹಮ್ಮದ್ ತಾಬಿಷ್ ಹಸನ್ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ್ದಾರೆ.
3 ವರ್ಷದ ಹಿಂದೆ ಮಹಮ್ಮದ್ ತಾಬಿಷ್ ಹಸನ್ ಚೆನೈಯಲ್ಲಿ ಜಿ.ಎಂ.ಎ. ಅಕಾಡೆಮಿಯ ಸಿ.ಪಿ.ಟಿ. ಪ್ರವೇಶ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಹಿರಿಯ ವಿದ್ಯಾರ್ಥಿ ಆಗಿರುವ ತಾಬಿಷ್ ಹಸನ್ ಉಪ್ಪಿನಂಗಡಿ ಲುಲು ಡ್ರೆಸಸ್ ಸಂಸ್ಥೆಯ ಇಕ್ಬಾಲ್ ಹಾಗೂ ತಸ್ಲೀಮಾ ದಂಪತಿಗಳ ಪುತ್ರ.