ಸೇನಾ ಪಡೆ ಯಾವುದೇ ಸವಾಲು ಎದುರಿಸಲಿದೆ: ಅರುಣ್ ಜೇಟ್ಲಿ

Update: 2017-08-09 17:54 GMT

ಹೊಸದಿಲ್ಲಿ, ಆ. 9: ಚೀನದೊಂದಿಗಿನ ಗಡಿ ಬಿಕ್ಕಟ್ಟಿನ ನಡುವೆಹೇಳಿಕೆ ನೀಡಿರುವ ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿ,  ಯಾವುದೇ ಭದ್ರತಾ ಸವಾಲನ್ನು ಎದುರಿಸಲು ಭಾರತೀಯ ಸೇನಾ ಪಡೆ ಸಾಕಷ್ಟು ಬಲಿಷ್ಠವಾಗಿದೆ ಎಂದಿದ್ದಾರೆ.

ಪಾಕಿಸ್ತಾನ 1948ರಿಂದ ಸ್ವಾಧೀನಪಡಿಸಿಕೊಂಡಿರುವ ಜಮ್ಮು ಹಾಗೂ ಕಾಶ್ಮೀರದ ಭಾಗಗಳನ್ನು ಮರು ವಶಪಡಿಸಿಕೊಳ್ಳುವ ಪ್ರಬಲ ಆಕಾಂಕ್ಷೆಯನ್ನು ಭಾರತದ ಜನರು ಹೊಂದಿದ್ದಾರೆ ಎಂದು ಅವರು ರಾಜ್ಯಸಭೆಗೆ ತಿಳಿಸಿದರು.

1942ರಲ್ಲಿ ಮಹಾತ್ಮಾ ಗಾಂಧಿ ಆರಂಭಿಸಿದ್ದ ಕ್ವಿಟ್ ಇಂಡಿಯಾ ಚಳವಳಿಯ 75ನೇ ವರ್ಷಾಚರಣೆ ನೆನಪಿನಲ್ಲಿ ಆಯೋಜಿಸಲಾದ ವಿಶೇಷ ಸಂವಾದದಲ್ಲಿ ಮಾತನಾಡಿದ ಅವರು, ಈ ದಶಕಗಳಲ್ಲಿ ಭಾರತ ಅನೇಕ ಸವಾಲುಗಳನ್ನು ಎದುರಿಸಿದೆ. ಆದರೆ, ಪ್ರತಿ ಸವಾಲು ಎದುರಿಸಿದಾಗಲೂ ದೇಶ ಬಲಿಷ್ಠವಾಗಿದೆ ಎಂದು ನಾವು ಹೆಮ್ಮೆಯಿಂದ ಹೇಳುತ್ತೇವೆ ಎಂದರು.

1962ರಲ್ಲಿ ಭಾರತ ಹಾಗೂ ಚೀನ ನಡುವೆ ಯುದ್ಧ ನಡೆಯಿತು. ಅಂದಿಗೆ ಹೋಲಿಸಿದರೆ, 1965 ಹಾಗೂ 1971ರಲ್ಲಿ ನಮ್ಮ ಸೇನಾ ಪಡೆ ಇನ್ನಷ್ಟು ಬಲಿಷ್ಠವಾಯಿತು ಎಂದು ಜೇಟ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News