ಸೈಬರ್ ಸಮನ್ವಯ ಕೇಂದ್ರ ಕಾರ್ಯಸಮರ್ಥ: ಸರಕಾರ

Update: 2017-08-09 17:56 GMT

ಹೊಸದಿಲ್ಲಿ, ಆ.9: ಸೈಬರ್ ಭದ್ರತೆಗೆ ಇರುವ ಬೆದರಿಕೆಯನ್ನು ಪತ್ತೆಹಚ್ಚಲು ರಚಿಸಲಾದ ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರ (ಎನ್‌ಸಿಸಿಸಿ)ದ ಪ್ರಥಮ ಹಂತ ಇದೀಗ ಕಾರ್ಯ ನಿರ್ವಹಣೆಗೆ ಸಿದ್ಧವಾಗಿದೆ ಎಂದು ಸರಕಾರ ತಿಳಿಸಿದೆ.

ಅಂತರ್ಜಾಲ ವ್ಯವಹಾರಗಳನ್ನು ಪರಿಶೀಲಿಸುವ ಕೇಂದ್ರವು ಸೈಬರ್ ಬೆದರಿಕೆಯನ್ನು ಪತ್ತೆಹಚ್ಚಿ, ವಿವಿಧ ಸಂಸ್ಥೆಗಳು ಹಾಗೂ ಅಂತರ್ಜಾಲ ಸೇವೆ ಪೂರೈಕೆದಾರರನ್ನು ಎಚ್ಚರಿಸಿ ಸಕಾಲಿಕ ಕ್ರಮ ಕೈಗೊಳ್ಳಲು ಸೂಚಿಸುತ್ತದೆ.

ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರವನ್ನು ಆರಂಭಿಸಲು ಸರಕಾರ ಪ್ರಸ್ತಾವಿಸಿದೆ.; ಇದರ ಪ್ರಥಮ ಹಂತ ಕಾರ್ಯನಿರ್ವಹಣೆಗೆ ಸಿದ್ಧವಾಗಿದೆ ಎಂದು ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಸಹಾಯಕ ಸಚಿವ ಪಿ.ಪಿ.ಚೌಧರಿ ಲೋಕಸಭೆಯಲ್ಲಿ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.

 ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯಡಿ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್(ಸಿಇಆರ್‌ಟಿ-ಇನ್) ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರವನ್ನು ಅನುಷ್ಠಾನಗೊಳಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News