×
Ad

ಆ.12ರಿಂದ ಮೀಯಪ್ಪದವಿನಲ್ಲಿ 'ಎಸ್ಸೆಸ್ಸೆಫ್ ಡಿವಿಷನ್ ಸಾಹಿತ್ಯೊತ್ಸವ್'

Update: 2017-08-10 20:07 IST

ಮಂಜೇಶ್ವರ, ಆ.10: ಎಸ್ಸೆಸ್ಸೆಫ್ ಮಂಜೇಶ್ವರ ಡಿವಿಷನ್ ಸಾಹಿತ್ಯೊತ್ಸವ್ ಆ.12,13 ರಂದು ಮೀಯ್ಯಪ್ಪದವು ಶಾಲಾ ವಠಾರದಲ್ಲಿ ನಡೆಯಲಿದೆ. 
12ರಂದು ಸಂಜೆ 3 ಗಂಟೆಗೆ ಸ್ವಾಗತ ಕಮಿಟಿ ಚೆಯರ್‍ಮಾನ್‍ ಹಾರಿಸ್ ಹನೀಫಿ ನೇತೃತ್ವದಲ್ಲಿ ದ್ವಜಾರೋಹಣ ನಡೆಯಲಿದೆ.

ಅಂದು ಸಂಜೆ 7ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಬಟ್ಟಿಪ್ಪದವು ಮುಹಮ್ಮದ್ ಮುಸ್ಲಿಯಾರ್ ಪ್ರಾರ್ಥನೆ ನಡೆಸುವರು. ಪೋಗ್ರಾಂ ಸಮಿತಿ ಚೆಯರ್‍ಮಾನ್‍ ಮಜೀದ್ ಸಅದಿ ಸುಬ್ಬಯಿಕಟ್ಟೆ ಅಧ್ಯಕ್ಷತೆಯಲ್ಲಿ ಪ್ರಮುಖ ಕನ್ನಡ ಸಾಹಿತಿ ಪಿ ಎನ್ ಮೂಡಿತ್ತಾಯ ಕಾರ್ಯಕ್ರಮವನ್ನು ಉಧ್ಘಾಟಿಸುವರು.

ಎಸ್ ವೈ ಎಸ್ ಉಪ್ಪಳ ಝೋನ್ ಅಧ್ಯಕ್ಷ ಸಿದ್ದೀಖ್ ಸಖಾಫಿ ಆವಳ ಸಂದೇಶ ಭಾಷಣ ಮಾಡುವರು. ಅಬ್ದುಲ್ ಹಮೀದ್ ಸಖಾಫಿ ಮೇರ್ಕಳ, ಮುಹಮ್ಮದ್ ಸಖಾಫಿ ತೋಕೆ, ಅಬ್ದುರ್ರಹ್ಮಾನ್ ಸಖಾಫಿ ಚಿಪ್ಪಾರ್, ಬಶೀರ್ ಮದನಿ, ಪಾರೂಖ್ ಪೊಸೋಟ್, ಅಶ್ರಫ್ ಸಖಾಫಿ ಉರ್ಣಿ, ನಿಯಾಝ್ ಸಖಾಫಿ ಆನೆಕಲ್ ಉಪಸ್ಥಿತರಿರುವರು. ನಂತರ ಕಲಾ ಸಾಹಿತ್ಯ ಸ್ಪರ್ಧೆಗಳು ನಡೆಯಲಿವೆ.

ಆ.13ರಂದು ಸಂಜೆ 3 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ.

ಡಿವಿಷನ್ ಅಧ್ಯಕ್ಷ ಯಹ್ಕೂಬ್ ನಹೀಮಿ ಅಲ್ ಅಫ್ಳಲಿ ಗುಡ್ಡಗೇರಿ ಅಧ್ಯಕ್ಷತೆಯಲ್ಲಿ ಡಿವಿಷನ್ ಉಪಾಧ್ಯಕ್ಷ ಸಯ್ಯಿದ್ ಉಬೈದುಲ್ಲಾ ಯಾಸೀನ್ ತಂಙಳ್ ಪ್ರಾರ್ಥನೆ ನಡೆಸುವರು. ಎಸ್ ವೈ ಎಸ್ ಜಿಲ್ಲಾ ಉಪಾದ್ಯಕ್ಷ ಸಯ್ಯಿದ್ ಜಲಾಲುದ್ದೀನ್ ಸಹದಿ ಅಲ್ ಬುಖಾರಿ ಉಧ್ಘಾಟಿಸುವರು. ಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾದಿಖ್ ಆವಳ, ಜಿಲ್ಲಾ ಕಾರ್ಯದರ್ಶಿ ಕೆ ಎಂ ಅಬ್ದುರ್ರಹ್ಮಾನ್ ಕಳತ್ತೂರ್ ಅನುಮೋಧನಾ ಭಾಷಣ ಮಾಡುವರು. ಕೇರಳ ಮುಸ್ಲಿಂ ಜಮಾಅತ್ ಮಂಜೇಶ್ವರ ಝೋನ್ ಅಧ್ಯಕ್ಷ ಮೂಸಲ್ ಮದನಿ ತಲಕ್ಕಿ, ಮೀಂಜ ಪಂಚಾಯತ್ ಸದಸ್ಯರಾದ ವಹೀದ್ ಕೆ, ಚಂದ್ರಶೇಖರ್ ಕೆ, ಕಿರ್ಷ್ಣ ಕೆ, ಎಸ್ ವಿ ವಿ ಎಚ್ ಎಸ್ ಮ್ಯಾನೇಜರ್ ಡಾ: ಜಯಪ್ರಕಾಶ ನಾರಾಯಣ ತೊಟ್ಟತ್ತೋಡಿ, ಎಸ್ ವಿ ವಿ ಎಯುಪಿ ಶಾಲಾ ಮ್ಯಾನೇಜರ್   ಆರ್ ಎಂ ಶ್ರೀದರ ರಾವ್ ಸನ್ಮಾನ ವಿತರಣೆ ನಡೆಸುವರು. ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಮಚ್ಚಂಪಾಡಿ, ಸ್ವದಖ ಹಿಮಮಿ ಪಾಪಿಲ, ಮುಹಮ್ಮದ್ ಸಖಾಫಿ ಸೋಂಕಾಲ್, ಫಾರೂಖ್ ಚಿನ್ನಮೊಗರು, ಝಖರಿಯ್ಯ ಬೊಳ್ಮಾರ್ ಮುಂತಾದವರು ವೇದಿಕೆಯಲ್ಲಿರುವರು. ಡಿವಿಷನ್ ಪ್ರಧಾನ ಕಾರ್ಯದರ್ಶಿ ನಂಷಾದ್ ಬೇಕೂರ್ ಸ್ವಾಗತಿಸಿ, ಸ್ವಾಗತ ಸಂಘ ಕನ್ವೀನರ್ ಅಬ್ಬಾಸ್ ಕುಳಬೈಲ್ ವಂದಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News