ಕದ್ದ ಚಿನ್ನಾಭರಣ ಖರೀದಿ: ಆರೋಪಿ ಸೆರೆ

Update: 2017-08-10 17:11 GMT

ಕಾರ್ಕಳ, ಆ.10: ಕಳವು ಆರೋಪಿಗಳಿಂದ ಚಿನ್ನಾಭರಣಗಳನ್ನು ಖರೀದಿಸಿದ ವ್ಯಕ್ತಿಯೊಬ್ಬನನ್ನು ಕಾರ್ಕಳ ಪೊಲೀಸರು ಹುಬ್ಬಳ್ಳಿಯಲ್ಲಿ ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ಹುಬ್ಬಳ್ಳಿ ಗಾಂಧಿನಗರದ ಮಿಥುನ್ ವೆಂಕಟೇಶ್ ರಾಯ್ಕರ್ ಎಂದು ಗುರುತಿಸಲಾಗಿದೆ. ಕಳೆದ ಎಪ್ರಿಲ್ ನಲ್ಲಿ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾನದಿ ಮತ್ತು ಮುದ್ರಾಡಿಯಲ್ಲಿ ಹಗಲು ವೇಳೆಯಲ್ಲಿ ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಿದ ಮೈಸೂರಿನ ಅರುಣ್ ಕುಮಾರ್ ಯಾನೆ ಕಿರಣ್(28), ಹುಬ್ಬಳ್ಳಿಯ ಅಮರೇಶ್(28) ಎಂಬವರನ್ನು ಉಡುಪಿ ಜಿಲ್ಲಾ ಅಪರಾಧ ಪತ್ತೆ ದಳದ ತಂಡ ಜು.18ರಂದು ಬಂಧಿಸಿತು.

ಬಂಧಿತರಿಂದ ಮಾಹಿತಿ ಪಡೆದು ಕಳವುಗೈದ ಸೊತ್ತುಗಳನ್ನು ಖರೀದಿಸಿದ ಮಿಥುನ್ ವೆಂಕಟೇಶ್ ರಾಯ್ಕರ್‌ನನ್ನು ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ ಎ. ಮತ್ತು ಅವರ ಅಪರಾಧ ಪತ್ತೆ ದಳದ ಸಿಬ್ಬಂದಿ, ಉಡುಪಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ಮತ್ತು ಅವರ ಸಿಬ್ಬಂದಿ ಸಹಕಾರದಿಂದ ಹುಬ್ಬಳ್ಳಿಯಲ್ಲಿ ಬಂಧಿಸಿದರು.

ಈತನಿಂದ ಸುಮಾರು 4,32,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಕಾರ್ಕಳ ನ್ಯಾಯಾ ಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ರಾಜೇಶ್ ಕುಂಪಲ, ಗಿರೀಶ್ ಉಳಿಯ, ಪ್ರಶಾಂತ್, ರಾಮ. ಗೋಕುಲ ಮತ್ತು ಜಿಲ್ಲಾ ಅಪರಾಧ ಪತ್ತೆ ದಳದ ರವಿ, ಸುರೇಶ್, ರಾಮು, ಶಿವಾನಂದ ಮತ್ತು ಉಡುಜಿ ಜಿಲ್ಲಾ ಬೆರಳು ಮುದ್ರೆ ಘಟಕ ಹಾಗೂ ಸಿಡಿಆರ್ ಘಟಕದ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News