ಸಂತ್ರಸ್ತೆಯ ಹಿಂಬಾಲಿಸುವ ಮೊದಲು ಮದ್ಯ ಖರೀದಿಸಿದ್ದ ಬರಾಲ
Update: 2017-08-11 18:58 IST
ಚಂಡೀಗಡ, ಆ.11: ಐಪಿಎಸ್ ಅಧಿಕಾರಿಯ ಪುತ್ರಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಪ್ರಕರಣದಲ್ಲಿ, ಸಂತ್ರಸ್ತೆಯನ್ನು ಹಿಂಬಾಲಿಸುವ ಮೊದಲು ಆರೋಪಿ ವಿಕಾಸ್ ಬರಾಲ ಮದ್ಯ ಖರೀದಿಸಿರುವುದು ಸಿಸಿಟಿವಿ ದೃಶ್ಯದಿಂದ ತಿಳಿದುಬಂದಿದೆ.
ಚಂಡೀಗಡದ ಸೆಕ್ಟರ್ 9ರಲ್ಲಿ ಇರುವ ಅಂಗಡಿಯೊಂದರಿಂದ ವಿಕಾಸ್ ಬರಾಲ ಮತ್ತಾತನ ಮಿತ್ರ ಆಶಿಶ್ ಕುಮಾರ್ ಮದ್ಯವನ್ನು ಖರೀದಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದಾಗ ಇವರಿಬ್ಬರು ಮದ್ಯದ ಅಮಲಿನಲ್ಲಿದ್ದರು ಎಂಬ ಆರೋಪಕ್ಕೆ ಈ ದೃಶ್ಯಾವಳಿ ಪುಷ್ಠಿ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿ ಚಂಡೀಗಡ ನ್ಯಾಯಾಲಯವು ಗುರುವಾರ ಇಬ್ಬರೂ ಆರೋಪಿಗಳಿಗೆ ಎರಡು ದಿನ ಪೊಲೀಸ್ ಕಸ್ಟಡಿ ವಿಧಿಸಿತ್ತು.