×
Ad

ಆ.14-15ರಂದು ಆರ್ಟ್, ಕ್ರಾಫ್ಟ್ ಮೇಳ

Update: 2017-08-11 19:27 IST

ಉಡುಪಿ, ಆ.11: ಕಟಪಾಡಿ ವನಸುಮ ಟ್ರಸ್ಟ್ ಮತ್ತು ವನಸುಮ ವೇದಿಕೆಯ ವತಿಯಿಂದ ಸಾಂಸ್ಕೃತಿಕ ಹಾಗೂ ಸಮಾಜಸೇವಾ ನಿಧಿಯ ಸಹಾಯಾರ್ಥ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಆರ್ಟ್ ಮತ್ತು ಕ್ರಾಫ್ಟ್ ಮೇಳವನ್ನು ಆ.14 ಮತ್ತು 15ರಂದು ಉದ್ಯಾವರ ಬಲಾಯಿಪಾದೆಯ ನಿತ್ಯಾನಂದ ಆರ್ಕೇಡ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಉತ್ತರ ಭಾರತದ ಗುಡ್ಡಗಾಡು ಕಲಾವಿದರ ಕರಕುಶಲ ಕಲಾಕೃತಿಗಳು, ಮಹಿಳೆಯರಿಗಾಗಿ ಮಣ್ಣಿನ ಆಭರಣಗಳು, ಶೃಂಗಾರ ಕಲಾಕೃತಿಗಳು, ಆವೆ ಮಣ್ಣಿನ ಕಲಾಕೃತಿಗಳು, ದೇಶಿ ವಸ್ತ್ರ ಭಂಡಾರ, ಪಿಂಗಾಣಿ, ಪೇಪರ್ ಕ್ರಾಫ್ಟ್‌ಗಳು ಸೇರಿದಂತೆ 130 ವಿವಿಧ ವಸ್ತುಗಳ ಪ್ರದರ್ಶನ ನಡೆಯಲಿವೆ ಎಂದು ವೇದಿಕೆಯ ಬಾಸುಮ ಕೊಡಗು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುಮ ಕ್ರಿಯೇಷನ್ಸ್ ಉಡುಪಿಯ ಆಶ್ರಯದಲ್ಲಿ ಭರತಾಂಜಲಿ ಕಡಿಯಾಳಿ ಸಹಯೋಗದಲ್ಲಿ ಸಿನೆಮಾ ಅಭಿನಯ ತರಬೇತಿ ಕಾರ್ಯಕ್ರಮವನ್ನು ಆ.19 ಮತ್ತು 20ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ಕಡಿಯಾಳಿಯ ಭರತಾಂಜಲಿ ಲಲಿತಾ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9448152235, 9980030400, 9980550400ನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ರಶ್ಮಿ ವಿಜಯೇಂದ್ರ, ಕಾವ್ಯವಾಣಿ ಕೊಡಗು, ವಿನಯ ಮುಂಡ್ಕೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News