×
Ad

ಹೆಮ್ಮಾಡಿ: ಹಳೆ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ

Update: 2017-08-11 19:29 IST

ಕುಂದಾಪುರ, ಆ.10: ಹೆಮ್ಮಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಹಳೆ ವಿದ್ಯಾರ್ಥಿ ಸಂಘವನ್ನು ಇತ್ತೀಚೆಗೆ ರಚಿಸಲಾಯಿತು.

ಸಂಘದ ಗೌರವಾಧ್ಯಕ್ಷರಾಗಿ ಅಶೋಕ್ ಭಟ್, ಅಧ್ಯಕ್ಷರಾಗಿ ಹರೀಶ್ ಭಂಡಾರಿ, ಉಪಾಧ್ಯಕ್ಷರಾಗಿ ಸುಮತಿ ಆಚಾರ್ಯ, ಕಾರ್ಯದರ್ಶಿಯಾಗಿ ಶ್ರೀಕಾಂತ ಹೆಮ್ಮಾಡಿ, ಜೊತೆ ಕಾರ್ಯದರ್ಶಿಯಾಗಿ ರಾಘವೇಂದ್ರ ಕುಲಾಲ್ ಹಾಗೂ ಚಂದ್ರ ಭಟ್, ಖಜಾಂಚಿಯಾಗಿ ರಾಘವೇಂದ್ರ ಪೂಜಾರಿ ಹೆದ್ದಾರಿ ಮನೆ, ಲೆಕ್ಕಪರಿಶೋಧಕರಾಗಿ ಲೂವಿಸ್ ಪ್ರಶಾಂತ್, ಕ್ರೀಡಾ ಕಾರ್ಯದರ್ಶಿ ಯಾಗಿ ಕೃಷ್ಣ ಕೋಟ್ಯಾನ್, ಜೊತೆ ಕ್ರೀಡಾಕಾರ್ಯದರ್ಶಿಯಾಗಿ ರವಿ ಮೊಗ ವೀರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಶಿಕಾಂತ, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಹೇಂದ್ರ ದೇವಾಡಿಗ, ವಿನಯ್ ಮೂವತ್ತುಮುಡಿ, ಸಂಘಟನಾ ಕಾರ್ಯದರ್ಶಿಗಳಾಗಿ ಚಂದ್ರ ಪೂಜಾರಿ, ಸುಕುಮಾರ್ ಪೂಜಾರಿ, ಸಂತೋಷ ಹೆಮ್ಮಾಡಿ, ಶ್ರೀಲತಾ ಹೆಮ್ಮಾಡಿ, ಜಯಲಕ್ಷ್ಮಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಹೆಮ್ಮಾಡಿ ಗ್ರಾಪಂ ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ, ಉಪಾಧ್ಯಕ್ಷ ಅಂತೋನಿ ಲೂವಿಸ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಹಟ್ಟಿಯಂಗಡಿ, ಉಪಾಧ್ಯಕ್ಷೆ ಲಕ್ಷ್ಮಿ ದೇವಾಡಿಗ, ಸದಸ್ಯರಾದ ಶ್ರೀಧರ ಆಚಾರ್ಯ, ದೀಪಾ, ಕಲ್ಪನಾ, ವನಜ, ನರಸಿಂಹ ದೇವಾಡಿಗ, ಶಿಕ್ಷಕಿಯರಾದ ಅಶ್ವಿನಿ, ಭಾನಿ, ಪೂರ್ಣಿಮಾ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಸುಶೀಲಾ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರೆಸಿಲ್ಲಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News