ಬೋಧನಾ ವಿಧಾನಗಳ ನವೀಕರಣ ಕುರಿತು ಕಾರ್ಯಾಗಾರ

Update: 2017-08-11 14:00 GMT

ಉಡುಪಿ, ಆ.10: ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ದ್ರವ್ಯ ಗುಣ ವಿಜ್ಞಾನ ವಿಭಾಗದ ವತಿಯಿಂದ ಪಠ್ಯಕ್ರಮ, ಪಾಠ ಯೋಜನೆ ಮತ್ತು ಬೋಧನಾ ವಿಧಾನಗಳನ್ನು ನವೀಕರಿಸುವ ಕುರಿತು ಮೂರು ದಿನಗಳ ಕಾರ್ಯಾ ಗಾರವನ್ನು ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಉಡುಪಿ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಕಾಂತ್ ಯು., ಮೂಡಬಿದ್ರೆ ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ವಿನಯಚಂದ್ರ ಶೆಟ್ಟಿ, ಡಾ.ನಾಗರಾಜ್ ಎಸ್., ಡಾ.ಅಶೋಕ್ ಕುಮಾರ್ ಬಿ.ಎನ್. ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಹಾಸನ ಕಾಲೇಜಿನ ಡಾ.ಪ್ರಕಾಶ್ ಎಲ್.ಹೆಗಡೆ, ಡಾ.ಪ್ರದೀಪ್, ಬೆಂಗಳೂರು ಕಾಲೇಜಿನ ಡಾ.ದಿವ್ಯ, ಉಡುಪಿ ಕಾಲೇಜಿನ ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಪಿ., ಡಾ.ಚೈತ್ರ ಎಸ್. ಹೆಬ್ಬಾರ್, ಡಾ. ಸುಮ ವಿ.ಮಲ್ಯ, ಡಾ.ಮುಹಮ್ಮದ್ ಪೈಸಲ್, ಡಾ.ರವಿಕೃಷ್ಣ ಎಸ್. ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News