ಕಲ್ಯಾಣಪುರ: ಮಹಿಳಾ ಘಟಕ ಉದ್ಘಾಟನೆ
Update: 2017-08-11 19:31 IST
ಉಡುಪಿ, ಆ.10: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ 2017-18 ಸಾಲಿನ ಮಹಿಳಾ ಘಟಕವನ್ನು ಮಾನಸಿಕ ತಜ್ಞೆ ಸೌಜನ್ಯಾ ಕರುಣಾಕರ್ ಶೆಟ್ಟಿ ಇತ್ತೀಚೆಗೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮಹಿಳೆ ಮತ್ತು ಆಕೆಯ ಆರೈಕೆ, ಇಂದಿನ ವಿಧ್ಯಾರ್ಥಿನಿಯರು ಹದಿಹರೆಯದಲ್ಲಿ ಎದುರಿಸುತ್ತಿರುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಮತ್ತು ಅವುಗಳನ್ನು ಎದುರಿಸಲು ಮಾಡಬೇಕಾದ ಹಲವು ಸಲಹೆಗಳನು್ನ ನೀಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ವಹಿಸಿದ್ದರು. ಮಹಿಳಾ ಘಟಕದ ಮುಖ್ಯಸ್ಥೆ ಕ್ಲಾರಾ ಮೆನೆಜಸ್, ಅಧ್ಯಕ್ಷೆ ಪ್ರತೀಕ್ಷಾ ಶರ್ಮ, ಉಪಾಧ್ಯಕ್ಷೆ ರಕ್ಷಾ ಬಿ ಶೆಟ್ಟಿ, ಕಾರ್ಯದರ್ಶಿ ಕಾವ್ಯ, ಉಪಕಾರ್ಯದರ್ಶಿ ವಿಲ್ಮ, ಕೋಶಾಧಿಕಾರಿ ದೀಪ್ತಿ ಶೆಟ್ಟಿ,ವರದಿಗಾರರಾದ ಪ್ರೀತಿ, ಮಧುರ ಉಪಸ್ಥಿತರಿದ್ದರು.
ಅಖಿಲಾ ನ್‌ಕಾ ಸ್ವಾಗತಿಸಿದರು. ಪಾವನ ಎಸ್.ಶೆಟ್ಟಿ ವಂದಿಸಿದರು. ಅಮ್ರೀನ್ ಸಾಲಿಯಾ ಶೇಕ್ ಕಾರ್ಯಕ್ರಮ ನಿರೂಪಿಸಿದರು